ದಾವಣಗೆರೆ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಶಾಸಕನಾಗಿ, ಸಚಿವನಾಗಿ ಅನುಭವವಿದೆ. ಆದರೆ ಒತ್ತಡ ಮಾಡುವುದಿಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (M.P.Renukacharya) ರಾಜ್ಯಾಧ್ಯಕ್ಷ ಪಟ್ಟದ ಆಸೆಯನ್ನು ಬಹಿರಂಗಪಡಿಸಿದ್ದಾರೆ.
ದಾವಣಗೆರೆಯ (Davanagere) ಹೊನ್ನಾಳಿಯಲ್ಲಿ (Honnali) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಪಕ್ಷದ ವಿರುದ್ಧ ಬೇಸರವನ್ನು ಹೊರಹಾಕಿದರು. ರಾಜ್ಯಾಧ್ಯಕ್ಷರು ಗೊಂದಲದ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ. ಒಮ್ಮೆ ರಾಜಿನಾಮೆ ನೀಡುತ್ತೇನೆ, ಮತ್ತೊಮ್ಮೆ ನೀಡುವುದಿಲ್ಲ ಎಂದು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದರು. ಯಡಿಯೂರಪ್ಪನವರನ್ನು (B.S.Yediyurappa) ಸಿಎಂ ಸ್ಥಾನದಿಂದ ಕೆಳಗಿಳಿಸಬಾರದಿತ್ತು. ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರಿಗೆ ಟಿಕೆಟ್ ತಪ್ಪಿಸಿದರು. ಪ್ರಣಾಳಿಕೆ ಸಮಿತಿಗೆ ಸುಧಾಕರ್‌ನನ್ನು ತಂದು ಕೂರಿಸಿದರು. ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ದಾರೆ. ರೇಣುಕಾಚಾರ್ಯ ಒಬ್ಬನಿಗೆ ಅಲ್ಲ, ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ನೋವಾಗಿದೆ ಎಂದು ಸ್ವಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಕ್ಕಿ ದೊರೆತ ತಕ್ಷಣದಿಂದಲೇ ಅನ್ನಭಾಗ್ಯ ಜಾರಿ: ಸಿದ್ದರಾಮಯ್ಯ
Advertisement
Advertisement
ನಮ್ಮ ಸರ್ಕಾರದ ತಪ್ಪು ನಿರ್ಧಾರಗಳಿಂದಲೇ ನಾವು ಸೋತಿದ್ದು. ಒಳ ಮೀಸಲಾತಿಗೆ ಕೈಹಾಕಬೇಡಿ ಎಂದು ಹೇಳಿದರೂ ಕೈಹಾಕಿದರು. ಮೀಸಲಾತಿಯ (Reservation) ಗೊಂದಲದ ನಿರ್ಣಾಯಗಳೇ ಮುಳುವಾಗಿದೆ. ಬಡ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದರು. 10 ಕೆಜಿ ಅಕ್ಕಿ ನೀಡುವುದು ಬಿಟ್ಟು ಕಡಿತ ಮಾಡಿದರು. ಎನ್‌ಪಿಎಸ್ ನೌಕರರ ಮನವಿಯನ್ನು ಸ್ವೀಕಾರ ಮಾಡಿ ಎಂದು ಹೇಳಿದರೂ ಮಾಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದಿನ ಸರ್ಕಾರದ ಪ್ರಮುಖ ಹಗರಣಗಳ ತನಿಖೆ: ಸಿದ್ದರಾಮಯ್ಯ
Advertisement
ಸೋಮಣ್ಣ (V.Somanna) ರಾಜ್ಯಾಧ್ಯಕ್ಷರ ಸ್ಥಾನ ಕೇಳಿದ್ದು ನನಗೆ ಗೊತ್ತಿಲ್ಲ. ಜಿಲ್ಲೆಯ ಎಲ್ಲಾ ಕಡೆ ನನಗೆ ಎಂಪಿ ಚುನಾವಣೆಗೆ (MP Election) ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಒತ್ತಡ ಹೆಚ್ಚಾದ ಕಾರಣ ನಾನೂ ಕೂಡ ಪ್ರಬಲ ಆಕಾಂಕ್ಷಿ. ಯಡಿಯೂರಪ್ಪನವರು ಕೂಡಾ ಜಿಎಂ ಸಿದ್ದೇಶ್ವರ್‌ಗೆ ಎಂಪಿ ಟಿಕೆಟ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದ್ದರಿಂದ ನಾನು ಕೂಡ ಪ್ರಬಲ ಆಕಾಂಕ್ಷಿ ಎಂದರು. ಇದನ್ನೂ ಓದಿ: ವಿಪಕ್ಷ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ – ವಿರೋಧ ಪಕ್ಷದ ವಿರುದ್ಧ ಮೋದಿ ಕಿಡಿ
Advertisement
ಹಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಜೈಲಿಗೆ ಕಳುಹಿಸಿದರು. ಮಾಡಾಳ್ ಪುತ್ರ ಮಾಡಾಳ್ ಮಲ್ಲಿಕಾರ್ಜುನ್‌ಗೆ ಟಿಕೆಟ್ ಕೊಡಬೇಕಿತ್ತು. ಅಲ್ಲಿಯೂ ತಪ್ಪು ಮಾಡಿದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರ್‌ಎಸ್‌ಎಸ್ ಹಸ್ತಕ್ಷೇಪ ಮಾಡಿಲ್ಲ. ಯಾರು ರಾಷ್ಟ್ರಭಕ್ತರಿರುತ್ತಾರೋ ಅವರಿಗೆ ಸಲಹೆ ಸೂಚನೆ ನೀಡಿದ್ದಾರೆ ಅಷ್ಟೇ. ನಮ್ಮ ಶಾಸಕರನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಡಿಕೆಶಿ, ಅಶ್ವಥ್ ನಾರಾಯಣ್ ಮುಖಾಮುಖಿ; ಪರಸ್ಪರ ಟಾಂಗ್
ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದು 1 ತಿಂಗಳು 10 ದಿನಗಳಾಗಿವೆ. ಡಿಕೆಶಿ, ಸಿದ್ದರಾಮಯ್ಯ ರಾಜ್ಯದಲ್ಲಿ ಭರವಸೆಗಳ ಗ್ಯಾರಂಟಿ ನೀಡಿದ್ದರು. ಈಗ ವಿದ್ಯುತ್ ದರ ಜಾಸ್ತಿ ಮಾಡಿದ್ದು, ಜನರಿಗೆ ದುಪ್ಪಟ್ಟು ಬಿಲ್ ಬಂದಿದೆ. ಕೆಇಆರ್‌ಸಿ ಬಿಲ್ ಏರಿಕೆ ವಿಚಾರ ತಂದಾಗ ನಮ್ಮ ಸರ್ಕಾರ ಅದನ್ನು ತಿರಸ್ಕಾರ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಸಹಿ ಮಾಡಿ ಅದನ್ನು ಜಾರಿಗೆ ತಂದಿದೆ. ಈ ಬಗ್ಗೆ ಸಿಎಂಗೆ ಅಧಿಕಾರವಿರುತ್ತದೆ. ಯಾಕೆ ಅದನ್ನು ಹಿಂಪಡೆಯಲಿಲ್ಲ? ಕರೆಂಟ್ ಬಿಲ್ ಜಾಸ್ತಿಯಾದರೆ ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತದೆ. ಮೋದಿಯವರು (Narendra Modi) ಕೋವಿಡ್ ಸಂದರ್ಭದಲ್ಲಿ ಬಡವರಿಗೆ 10 ಕೆಜಿ ಅಕ್ಕಿ ನೀಡಿದ್ದರು. ನಾರಿಯರ ಹಾಗೂ ಬಿಲ್ ಶಾಪ ಇವರಿಗೆ ತಟ್ಟುತ್ತದೆ. ಆಟೋ ಚಾಲಕರಿಗೆ, ಖಾಸಗಿ ಬಸ್ ಮಾಲೀಕರಿಗೆ ಒಂದು ವ್ಯವಸ್ಥೆ ಮಾಡಿ. ನಿರುದ್ಯೋಗ ಹೊಂದಿರುವ ಯುವಜನತೆಗೆ ಎಲ್ಲಾರಿಗೂ ಹಣ ನೀಡಬೇಕೆಂದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿಗರು ತಮ್ಮೊಳಗೆ ಬಡಿದಾಡಿಕೊಳ್ತಿದ್ದಾರೆ – ಮರೆಮಾಚಲು ಕಾಂಗ್ರೆಸ್ ಮೇಲೆ ಕಮಿಷನ್ ಆರೋಪ ಮಾಡ್ತಿದ್ದಾರೆ: ಬೋಸರಾಜು