ಬೆಂಗಳೂರು: ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷಪಡಿಸಿದ್ದಾರೆ.
ಕ್ಷೇಮವನದಲ್ಲಿ ನೂತನ ಶಾಕರಿಗೆ ನಡೆದ ಶಿಬಿರದಲ್ಲಿ ಮಾತನಾಡಿದ ಅವರು, ರಾಜಕೀಯ ಚುನಾವಣೆಯಿಂದ ನಿವೃತ್ತಿ ಆಗೋದಾಗಿ ಸ್ಪಷ್ಟಪಡಿಸಿದರು. ಶಾಸಕ ಅಶೋಕ್ ರೈ (ML Ashok Rai) ಮುಖ್ಯಮಂತ್ರಿಗಳಿಗೆ ಸೋಲಿನ ಬಳಿಕ ನೀವು ಗೆದ್ದದ್ದು ಹೇಗೆ ಅಂತ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡಿದ ಅವರು, ಜನ ನಡುವೆ ಇದ್ದಾಗ, ಜನರ ಕಷ್ಟ ಸುಖಕ್ಕೆ ಸ್ಪಂದನೆ ಮಾಡಿದ್ರೆ ಜನ ಕೈ ಬಿಡೋಲ್ಲ. ನಮ್ಮ ತಪ್ಪಿನಿಂದ ಸೋತಿರುತ್ತೇವೆ. ಕೆಲವು ಲೋಪ ದಿಂದ ಸೋತಿರುತ್ತೇವೆ. ಆದರೆ ಜನರ ಪರ, ಜನ ಜೊತೆ ಇದ್ದರೆ ಅವರು ಯಾವತ್ತೂ ಕೈ ಬಿಡೊಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮೊಬೈಲ್ ಬಳಸುತ್ತಿಲ್ಲವಂತೆ!- ಕಾರಣ ಇಲ್ಲಿದೆ
Advertisement
Advertisement
ಇದೇ ವೇಳೆ ಮಾತನಾಡಿದ ಅವರು, ಇದು ನನ್ನ ಕೊನೆ ಚುನಾವಣೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗ್ತೀನಿ. ಆದರೆ ಜನ ಮಧ್ಯೆ ಇರುತ್ತೇನೆ ಅಂತ ತಿಳಿಸಿದರು. ಶಿವಮೊಗ್ಗ ಶಾಸಕರು ಕೇಳಿದ ತುರ್ತು ಪರಿಸ್ಥಿತಿ ಪ್ರಶ್ನೆಗೆ ಉತ್ತರಿಸಿದ ಅವರು, ತುರ್ತು ಪರಿಸ್ಥಿತಿಯನ್ನು ನಾನು ವಿರೋಧಿಸಿದ್ದೆ. ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಭಾಷಣ ಮಾಡಿದ್ದೆ. ಮೈಸೂರಿನ ಸೈಯಾಜಿರಾವ್ ರಸ್ತೆಯಲ್ಲಿ ಟೇಬಲ್ ಹಾಕಿಕೊಂಡು ಭಾಷಣ ಮಾಡಿದ್ದೆ. ತುರ್ತು ಪರಿಸ್ಥಿತಿ ವಿರೋಧಿಸಿ ಹ್ಯಾಂಡ್ ಬಿಲ್ ಹಂಚಿದ್ದೆ. ಪೊಲೀಸರು ಒದ್ದು ಒಳಗೆ ಹಾಕಿದ್ದರು. ದೇವರಾಜ ಠಾಣೆ ಪೊಲೀಸರು ಒಂದು ದಿನ ಜೈಲಿಗೆ ಹಾಕಿದ್ದರು ಅಂತ ಅ ದಿನಗಳನ್ನ ನೆನಪು ಮಾಡಿಕೊಂಡ್ರು.
Advertisement