ಬೆಂಗಳೂರು: ಬಜೆಟ್ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ಬಜೆಟ್ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತದೆ. ಅಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರಿಸಲಿದ್ದಾರೆ ಎಂದು ಬಜೆಟ್ ಬಗ್ಗೆ ಅನಗತ್ಯ ಟೀಕೆಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದರು.
ಬಜೆಟ್‍ನಲ್ಲಿ ಒಕ್ಕಲಿಗರಿಗೆ ಶೇ.32ರಷ್ಟು ಲಾಭ ಸಿಕ್ಕಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಹಳೆ ಮೈಸೂರು ಭಾಗದಲ್ಲಿ ಇರೋದು ಕೇವಲ ನಾಲ್ಕೈದು ಜಿಲ್ಲೆಗಳು ಮಾತ್ರ. ಮಂಗಳೂರು, ಬೀದರ್‍ನಲ್ಲಿಯೂ ಒಕ್ಕಲಿಗರು ಇದ್ದಾರೆ. ಕರ್ನಾಟಕದ ಎಲ್ಲ ಭಾಗದವರಿಗೂ ಬಜೆಟ್‍ನಲ್ಲಿ ಲಾಭ ಸಿಗಲಿದೆ. ಒಕ್ಕಲಿಗರಿಗೆ ಶೇ.32 ಲಾಭ ಸಿಕ್ಕಿದೆ ಅಂತಾ ಲೆಕ್ಕ ಹಾಕಿದ್ದು, ಯಾರು? ಇದೆಲ್ಲಾ ಸೆನ್ಸ್ ಲೆಸ್ ರಿಪೋರ್ಟ್ ಎಂದು ವಾಗ್ದಾಳಿ ನಡೆಸಿದ್ರು.
Advertisement
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಂದುವರೆಸಿಕೊಂಡು ಬರಲಾಗಿದೆ. ಉತ್ತರ ಕರ್ನಾಟಕದ ಬಗ್ಗೆ ನನಗೂ ಗೊತ್ತಿದೆ. ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಪ್ರಶ್ನೆಗಳಿಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾರೆ ಎಂದು ತಿಳಿಸಿದರು.