ಮೈಸೂರು: ಅನೈತಿಕ ಸಂಬಂಧ ಎಂದು ಶಂಕಿಸಿ ಪತ್ನಿ ತನ್ನ ಪತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯೊಂದು ಮೈಸೂರಿನ ಉದಯಗಿರಿಯ ಸತ್ಯಾನಗರದಲ್ಲಿ ನಡೆದಿದೆ.
ಮಹಜರ್ ಪಾಷಾ(45) ಗಾಯಗೊಂಡ ಪತಿ. 23 ವರ್ಷಗಳ ಹಿಂದೆ ಮಮ್ತಾಜ್ ಹಾಗೂ ಮಹಜರ್ ಪಾಷಾ ಮದುವೆಯಾಗಿದ್ದರು. ಈ ದಂಪತಿ ಒಟ್ಟು 6 ಮಕ್ಕಳನ್ನು ಹೊಂದಿದ್ದಾರೆ. ಮಹಜರ್ ಪಾಷಾ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಪತಿ ಮಹಜರ್ ಪಾಷಾ ಅನೈತಿಕ ಸಂಬಂಧದ ಬಗ್ಗೆ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಮಹಜರ್ ರಾತ್ರಿ ಮಲಗಿದ್ದ ವೇಳೆ ಮಮ್ತಾಜ್ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಮಹಜರ್ ಪಾಷಾ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ನೋವಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಮ್ತಾಜ್ (44)ಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv