ಇತ್ತೀಚೆಗಷ್ಟೇ ರೋಶನ್ (Roshan) ಜೊತೆ ಮದುವೆಯಾದ ಆ್ಯಂಕರ್ ಅನುಶ್ರೀ (Anushree) ದಾಂಪತ್ಯ ಜೀವನದ ಖುಷಿಯಲ್ಲಿದ್ದಾರೆ. ಮದುವೆ ಬಳಿಕ ಪತಿ ಜೊತೆ ಪ್ರವಾಸ ಮಾಡ್ತಿರುವ ಫೋಟೋಗಳನ್ನ ಇತ್ತೀಚೆಗೆ ಅನುಶ್ರೀ ಹಂಚಿಕೊಂಡಿದ್ದರು. ಈಗ ಪತಿ ಅಡುಗೆ ಮಾಡಿ ತಮಗೆ ತಿನ್ನಿಸಿರುವ ವೀಡಿಯೋ ಹಂಚಿಕೊಂಡಿದ್ದಾರೆ.
ಮದುವೆ ಶಾಸ್ತ್ರದ ಬಳಿಕ ಮಾಧ್ಯಮದ ಜೊತೆ ಅನುಶ್ರೀ ಮಾತನಾಡುತ್ತಾ ಪತಿ ರೋಶನ್ ಚೆನ್ನಾಗಿ ಅಡುಗೆ ಮಾಡ್ತಾರೆ. ನಾನು ಆರಾಮಾಗಿ ತಿನ್ಕೊಂಡ್ ಇರ್ತೀನಿ ಎಂದು ಹೇಳಿ ನಕ್ಕಿದ್ದರು.
ಇದೀಗ ಅದೇ ಚಿತ್ರಣವನ್ನ ತೋರಿಸಿದ್ದಾರೆ. ರೋಶನ್ ತಮ್ಮ ಕೈಯಾರೇ ನುಗ್ಗೆಸೊಪ್ಪಿನ ಎಗ್‌ಬುರ್ಜಿ ಮಾಡಿ ದೋಸೆ ಜೊತೆ ಅನುಶ್ರೀಗೆ ತಿನ್ನಿಸಿದ್ದಾರೆ. ಈ ವೀಡಿಯೋವನ್ನ ಅನುಶ್ರೀ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!
View this post on Instagram
ನಿಮಿಷಕ್ಕೆ ಸಾವಿರಾರು ವೀವ್ಸ್ ಲೈಕ್ಸ್ ಬರುತ್ತಿದೆ. ಅನುಶ್ರೀಯ ಸುಖ ಸಂಸಾರಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿಕೆಶಿ ವೈಲ್ಡ್ ಕಾರ್ಡ್‌ಎಂಟ್ರಿ – ಬಿಗ್‌ಬಾಸ್ ಮನೆ ಓಪನ್ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್ ಸ್ಟೋರಿ
ಕಳೆದ ಆಗಸ್ಟ್ 28 ರಂದು ಅನುಶ್ರೀ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಶನ್ ಜೊತೆ ವಿವಾಹವಾಗಿದ್ದರು. ಇದೀಗ ಮದುವೆಯ ನಂತರದ ಸುಖೀ ಜೀವನದ ದರ್ಶನವನ್ನ ಪ್ರಪಂಚದ ಮುಂದೆ ತೆರೆದಿಟ್ಟಿದ್ದಾರೆ.