ಹುಣಸೋಡು ಸ್ಫೋಟ ಪ್ರಕರಣ – ಆರನೇ ವ್ಯಕ್ತಿ ಮೃತದೇಹ ಡಿಎನ್‍ಎ ವರದಿಯಿಂದ ಪತ್ತೆ

Public TV
2 Min Read
FotoJet 29 2

– ಡಿಎನ್‍ಎ ವರದಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಪೋಷಕರು

ಶಿವಮೊಗ್ಗ: ಹುಣಸೋಡು ಬಳಿ ಜನವರಿ 21 ರಂದು ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಆರನೇ ಮೃತದೇಹದ ಬಗ್ಗೆ ಡಿಎನ್‍ಎ ವರದಿಯಿಂದ ಪತ್ತೆಯಾಗಿದೆ.

Hunasodu Spota DNA Visuals Shashi

ಆ ಮೃತದೇಹವು ಭದ್ರಾವತಿಯ ಕೆ.ಎಚ್.ನಗರ ನಿವಾಸಿ, ಆಟೋ ಚಾಲಕ ಶಶಿ ಅಲಿಯಾಸ್ ದೇವೇಂದ್ರ ಎಂಬುವನದ್ದು ಎಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿದೆ. ಆದರೆ ಪೋಷಕರು ಮಾತ್ರ ಇದು ನಮ್ಮ ಮಗನಲ್ಲ ಎಂದು ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

ಕಳೆದ ಜನವರಿ 21ರ ರಾತ್ರಿ ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟದಲ್ಲಿ ಆರು ಜನರ ಮೃತದೇಹಗಳು ಪತ್ತೆಯಾಗಿದ್ದವು. ಸ್ಫೋಟ ನಡೆದ 3-4 ದಿನಗಳ ಬಳಿಕ ಐವರ ಮೃತದೇಹಗಳ ಗುರುತು ಪತ್ತೆಯಾಗಿತ್ತು. ಆದರೆ ಆರನೇ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪೊಲೀಸರು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ದೇಹದ ಅಂಗಾಂಗಗಳನ್ನು ಕಳುಹಿಸಿದ್ದರು. ಈಗ ಮೃತದೇಹ ಭದ್ರಾವತಿಯ ಕೆ.ಎಚ್.ನಗರದ ಶಶಿ ಎಂಬುವವರದ್ದು ಎಂದು ಪೊಲೀಸರು ವರದಿ ನೀಡಿದ್ದಾರೆ. ಆದರೆ ಶಶಿ ಪೋಷಕರು ಮಾತ್ರ ಇದನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ:  ರೇವ್ ಪಾರ್ಟಿ ಜಾಗದಲ್ಲಿ ಗೋಶಾಲೆ ನಿರ್ಮಾಣ – ಮಾಲೀಕರಿಗಾಗಿ ಪೊಲೀಸರ ಹುಡುಕಾಟ

ಈ ಕುರಿತು ಪ್ರತಿಕ್ರಿಯಿಸಿದ ಶಶಿ ಪೋಷಕರು, ಡಿಎನ್‍ಎ ವರದಿ ಪ್ರಕಾರ ಆರನೇ ಮೃತದೇಹ ನಮ್ಮ ಮಗನದ್ದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಸ್ಫೋಟಗೊಂಡ ಬಳಿಕ ಶಶಿ ತನ್ನ ಸ್ನೇಹಿತರ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದಾನೆ. ಸತ್ತವನು ಹೇಗೆ ಮಾತನಾಡಲು ಸಾಧ್ಯ ಎಂದು ಫೊಷಕರು ಪ್ರಶ್ನೆ ಮಾಡಿದ್ದಾರೆ.

FotoJet 28 1

ದೇಹದ ಪತ್ತೆಗೆ ನಮಗೆ ಕರೆಸಿದ್ದಾಗ ನಾನು ಮೃತದೇಹ ನಮ್ಮ ಮಗನದ್ದಲ್ಲ ಎಂದರೂ ಸಹ ಪೊಲೀಸರು ಒಪ್ಪದೆ, ನಮ್ಮದೇ ಎಂದು ವಾದಿಸಿದ್ದರು. ಇದೀಗ ಮತ್ತೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಮಗನ ಬಳಿ ಎರಡು ಫೋನ್ ನಂಬರ್ ಇತ್ತು. ಈ ಫೋನ್ ನಂಬರ್‍ಗಳ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಎರಡನ್ನೂ ಪರಿಶೀಲಿಸಿದ್ರೆ ಮಾಹಿತಿ ಸಿಗುತ್ತದೆ. ಆದರೆ ಇದನ್ನು ಪೊಲೀಸರು ಮಾಡುತ್ತಿಲ್ಲ. ಬದುಕಿರುವ ನಮ್ಮ ಮಗನನ್ನು ಪೊಲೀಸರೇ ಸಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:  ನಾನು ಒಬ್ಬ ಜನಪ್ರತಿನಿಧಿ – ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು

FotoJet 27 2

ಸ್ಫೋಟದ ಸ್ಥಳದಲ್ಲಿದ್ದ ನಾಗರಾಜ್ ಹಾಗು ಪುನೀತ್ ಎಂಬುವವರು ಸಹ ಘಟನೆಯ ನಂತರ ನಾಪತ್ತೆಯಾಗಿದ್ದಾರೆ. ಪೊಲೀಸರು ಇವರಿಬ್ಬರ ಪತ್ತೆಗಾಗಿ ಎಲ್ಲಾ ಕಡೆ ಕಾರ್ಯಾಚರಣೆ ನಡೆಸಿದರೂ, ಇಬ್ಬರ ಸುಳಿವು ಮಾತ್ರ ಇದುವರೆಗೂ ದೊರೆತಿಲ್ಲ. ಇವರು ಏನಾದರೂ ಎಂಬುದು ತಿಳಿದಿಲ್ಲ. ಈಗಾಗಿ ನಾಗರಾಜ್ ಹಾಗೂ ಪುನೀತ್ ಕುಟುಂಬಸ್ಥರು ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪತ್ತೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *