ಬೆಂಗಳೂರು: ಮುಸ್ಲಿಂ ಯುವತಿ ಅವಾಚ್ಯ ಪದಗಳಿಂದ ಬೈದಿದ್ದ ಯುವಕರು ನಾವು ಪ್ರಚಾರದ ಹುಚ್ಚಿಗೆ ವಿಡಿಯೋ ಮಾಡಿದ್ದೆವು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
Advertisement
ಹಿಂದೂ ಯುವಕನ ಬೈಕ್ ನಲ್ಲಿ ಹೋಗುತ್ತಿದ್ದಳು ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಸೊಹೇಲ್ ಮತ್ತು ನಯಾಜ್ ಅವರನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದರು.
Advertisement
ಕಳೆದ ಶುಕ್ರವಾರ ನಗರದ ಡೈರಿ ಸರ್ಕಲ್ ನಲ್ಲಿ ಕೆಲಸ ಮುಗಿಸಿ ಹಿಂದೂ ಯುವಕನ ಜೊತೆಗೆ ಬೈಕ್ ನಲ್ಲಿ ಬರುತ್ತಿದ್ದಳು ಎಂಬ ಕಾರಣಕ್ಕೆ, ಬೈಕ್ ತಡೆದ ಇಬ್ಬರು ಇದು ಮುಸ್ಲಿಂ ಸಂಪ್ರದಾಯಕ್ಕೆ ಮಾಡುವ ಅವಮಾನ ಎಂದು ಗಲಾಟೆ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು. ಇದನ್ನೂ ಓದಿ: ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಗ್ಯ ನಿರೀಕ್ಷಕ
Advertisement
Advertisement
ಹಲ್ಲೆಯ ವೀಡಿಯೋವನ್ನು ಸೊಹೇಲ್ ತನ್ನ ಫೇಸ್‍ಬುಕ್ ಅಕೌಂಟ್ ನಲ್ಲಿ ಶೇರ್ ಮಾಡ್ಕೊಂಡಿದ್ದರು. ಈಗ ಆ ವೀಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು, ಭಯಗೊಂಡ ಸೊಹೇಲ್ ತಕ್ಷಣ ಅದನ್ನು ಡಿಲೀಟ್ ಕೂಡ ಮಾಡಿದ್ದರು. ಅಷ್ಟರೊಳಗೆ ವಿಡಿಯೋ ವೈರಲ್ ಆಗಿದನ್ನು ಗಮನಿಸಿದ ಸುದ್ದಗುಂಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಂತರ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಇಬ್ಬರು ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಚಾರದ ಹುಚ್ಚಿಗೆ ಬಿದ್ದು ಈ ರೀತಿ ಯಡವಟ್ಟು ಮಾಡಿಕೊಂಡ್ವಿ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ. ಧರ್ಮದ ವಿಚಾರವನ್ನು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ರೆ ಹೆಚ್ಚು ಪ್ರಚಾರ ಸಿಗುತ್ತೆ, ಅದರಿಂದ ಬೇಗ ಫೇಮಸ್ ಆಗಬಹುದು ಎಂದು ಪ್ಲಾನ್ ಮಾಡಿ ಕೃತ್ಯವೆಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಣ್ಣ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆ
ಮುಸ್ಲಿಂ ಯುವಕರಿಂದ ಹಲ್ಲೆಗೊಳಾಗದ ಮಹಿಳೆ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಅದೇ ದಿನ ಬೆಸ್ಟ್ ಎಂಪ್ಲಾಯ್ ಅವಾರ್ಡ್ ಆಗಿ ಲ್ಯಾಪ್ ಟಾಪ್ ಬಹುಮಾನ ತೆಗೆದುಕೊಂಡಿದ್ದರು. ಇದೇ ವಿಚಾರಕ್ಕೆ ಅಂದು ಕೆಲಸ ಮುಗಿಸಿ ಮನೆಗೆ ಹೊರಡೋದು ತಡವಾಗಿದ್ದರಿಂದ ಸಹೋದ್ಯೋಗಿ ಮಹೇಶ್ ಅವರ ಜೊತೆಗೆ ಬಂದಿದ್ದರು. ತಾನು ಸಹೋದ್ಯೋಗಿ ಜೊತೆ ಬರುತ್ತಿರುವ ವಿಚಾರವನ್ನು ಪತಿಗೆ ತಿಳಿಸಿದ್ದರು.