ವಾಷಿಂಗ್ಟನ್: ಸ್ಪೇಸ್‍ಎಕ್ಸ್ ಕಂಪನಿಯ ಸಿಇಒ ಎಲೋನ್ ಮಸ್ಕ್ ಒಂದು ಹೊಸ ಹೇಳಿಕೆಯನ್ನು ನೀಡುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಮುಂದೆ ನಡೆಯಬಹುದಾದ ಭವಿಷ್ಯದ ಸುಳಿವು ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಾನವನೂ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬಹುದು ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.
ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬೇಕೆಂಬ ಕನಸು ಹಲವು ವಿಜ್ಞಾನಿಗಳದ್ದು. ಈ ವಿಚಾರ ಹೊಸದೇನಲ್ಲ. ಕಳೆದ 2 ದಶಕಗಳಿಂದಲೂ ಇದರ ಬಗ್ಗೆ ಹಲವು ಅನ್ವೆಷಣೆಗಳೂ, ತಂತ್ರಜ್ಞಾನದ ಪರೀಕ್ಷೆಗಳೂ ನಡೆದಿವೆ. ಇದೀಗ ವಿಶ್ವದ ಅತ್ಯಂತ ಶ್ರೀಮಂತನ ಹೇಳಿಕೆಯಿಂದಾಗಿ ವಿಶ್ವವ್ಯಾಪಿ ಜನರು ಮುಂದೆ ನಡೆಯಬಹುದಾದ ಭವಿಷ್ಯವನ್ನು ನೋಡಲು ಕಾತುರರಾಗಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ
Advertisement
Advertisement
ಸ್ಪೇಸ್‍ಎಕ್ಸ್‍ನ ಸ್ಟಾರ್‍ಶಿಪ್ ರಾಕೆಟ್‍ಗಳಲ್ಲಿನ ಬೆಳವಣಿಗೆಯ ಆಧಾರಗಳ ಮೇಲೆ ಎಲೋನ್ ಮಸ್ಕ್ ಈ ಸುಳಿವನ್ನು ನೀಡಿದ್ದು, ಕಂಪನಿಯ ಪ್ರಯತ್ನ ಎಷ್ಟೊಂದು ಗಂಭೀರವಾದುದು ಎಂಬುದನ್ನು ತಿಳಿಸುತ್ತದೆ.
Advertisement
ಇತ್ತೀಚಿನ ಸಂದರ್ಶನವೊಂದರಲ್ಲಿ ಮಸ್ಕ್‍ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಸ್ಪೇಸ್‍ಎಕ್ಸ್ ಮಂಗಳ ಗ್ರಹದ ಮೇಲೆ ಮಾನವನನ್ನು ಯಾವಾಗ ಹೊತ್ತೊಯ್ಯಬಹುದು ಎಂಬ ಪ್ರಶ್ನೆಗೆ ಮಸ್ಕ್ ಒಳ್ಳೆಯ ಸನ್ನಿವೇಶವಿದ್ದರೆ ಮುಂದಿನ 5 ವರ್ಷಗಳೊಳಗೆ ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬಹುದು. ಅದೇ ಸನ್ನಿವೆಶ ಚೆನ್ನಾಗಿಲ್ಲವೆಂದಾದಲ್ಲಿ ಈ ಸಮಯಾವಕಾಶ 10 ವರ್ಷಗಳ ವರೆಗೆ ವಿಸ್ತರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
Advertisement
ಮಂಗಳ ಗ್ರಹದ ಮೇಲೆ ಮನುಷ್ಯರು ಇಳಿಯುವ ಬಗ್ಗೆ ಎಲೋನ್ ಮಸ್ಕ್ ಹೇಳಿಕೆ ನೀಡಿರುವುದು ಇದು ಮೊದಲೇನಲ್ಲ. ಈ ತಿಂಗಳಿನ ಪ್ರಾರಂಭದಲ್ಲಿಯೂ ಸಂದರ್ಶನವೊಂದರಲ್ಲಿ ನಾವು 5 ವರ್ಷಗಳಲ್ಲಿ ಮಂಗಳ ಗ್ರಹದ ಮೇಲೆ ಇಳಿಯದಿದ್ದರೆ ನನಗೇ ಆಶ್ಚರ್ಯವಾಗುತ್ತದೆ ಎಂದು ಮಸ್ಕ್ ಹೇಳಿಕೆ ನೀಡಿದ್ದರು.