ಹಾವೇರಿ: ದೇಶದಲ್ಲಿ ಶೇ.60ರಷ್ಟು ಯುವ ಶಕ್ತಿ ಇದೆ. ಈ ಶಕ್ತಿಯೇ ದೇಶದ ಭವಿಷ್ಯ ಬದಲಾಯಿಸುತ್ತೆ ಅಂತ ಎಲ್ಲಾ ಕಡೆ ಕೇಳೇ ಇರ್ತೀವಿ. ಅದು ನಿಜ ಅನ್ನೋದನ್ನ ಹಾವೇರಿಯ ಹಿರೇಕೆರೂರು ತಾಲೂಕಿನ ಹುಲ್ಲತ್ತಿ ಗ್ರಾಮದ ಯುವಕರು ಮಾಡಿ ತೋರಿಸಿದ್ದಾರೆ.
ಹಾವೇರಿ ತಾಲೂಕಿನ ಹಿರೇಕೆರೂರು ತಾಲೂಕಿನ ಹುಲ್ಲತ್ತಿ ಗ್ರಾಮದ ಕೆರೆಯು ಕಳೆದ ನಾಲ್ಕು ವರ್ಷಗಳ ಬರದಿಂದಾಗಿ ರಾಜ್ಯದ ಇತರೆ ಕೆರೆಗಳಂತೆ ಹುಲ್ಲತ್ತಿ ಗ್ರಾಮದ ಸುತ್ತ ಇರೋ ಐದು ಕೆರೆಗಳು ಬರಿದಾಗಿದ್ದವು. ಜನ, ಜಾನುವಾರು ನೀರಿಗಾಗಿ ಹೈರಾಣಾಗಿದ್ದವು. ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ತಾವೇ ಎಚ್ಚೆತ್ತ ಗ್ರಾಮದ ಯುವಕರಿಗೆ ತುಂಗಾ ಮೇಲ್ದಂಡೆ ಕಾಲುವೆ ನೀರು ಜೀವಜಲವಾಗಿ ಕಾಣಿಸಿತ್ತು. ತಕ್ಷಣ ಒಗ್ಗೂಡಿದ ಗ್ರಾಮದ 25 ಯುವಕರ ತಂಡ ತಾವೇ ಕೈಯಿಂದ 60 ರಿಂದ 90 ಸಾವಿರದವರೆಗೆ ಶಕ್ತ್ಯಾರ್ಹ ಹಣ ಹಾಕಿದ್ರು.
Advertisement
Advertisement
ಹುಲ್ಲತ್ತಿ ಗ್ರಾಮದಿಂದ ನಾಲ್ಕೂವರೆ ಕಿ.ಮೀ. ದೂರವಿರೋ ತುಂಗಾಮೇಲ್ದಂಡೆ ಯೋಜನೆಯ ಕಾಲುವೆಯಿಂದ ಪೈಪ್‍ಲೈನ್ ಮೂಲಕ ಕೆರೆಗಳಿಗೆ ನೀರು ಹರಿಯುವಂತೆ ಮಾಡಿದ್ರು. ನಂತರ ಗ್ರಾಮ ಮತ್ತು ಗ್ರಾಮದ ಹೊರವಲಯದಲ್ಲಿರೋ ಕೆರೆಗಳಿಗೆ ನೀರು ಹರಿಯುವಂತೆ ಮಾಡಿದ್ರು. ಈಗ ಜನ-ಜಾನುವಾರು ನಿಟ್ಟುಸಿರು ಬಿಟ್ಟಿದ್ರೆ, ಅಂತರ್ಜಲ ಹೆಚ್ಚಾಗಿ ಬೋರ್‍ಗಳಲ್ಲಿ ನೀರು ಜಿನುಗಿದೆ.
Advertisement
ಒಟ್ಟಿನಲ್ಲಿ ಕಳೆದ ಒಂದು ತಿಂಗಳಿಂದ ಗ್ರಾಮದ ಯುವಕರ ತಂಡ ಕೆರೆ ತುಂಬಿಸೋ ಕಾರ್ಯ ಮಾಡಿದ್ದು, ಒಂದು ಕೆರೆ ತುಂಬಿದ ನಂತರ ಮತ್ತೊಂದು ಕೆರೆಗೆ ನೀರು ಹರಿಯುವಂತೆ ಪ್ಲಾನ್ ಮಾಡಿದ್ದಾರೆ.
Advertisement
https://www.youtube.com/watch?v=ljyyKcPZgbg