ಬೀಜಿಂಗ್: ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ಘಟನೆಯೊಂದು ಚೀನಾದಲ್ಲಿ ನಡೆದಿದೆ.
ಮನೆಯೊಳಗೆ ಎಲೆಕ್ಟ್ರಿಕ್ ಸ್ಕೂಟರೊಂದು ಚಾರ್ಜ್‌ಗೆ ಇಟ್ಟಿದ್ದರು. ಆ ಸ್ಕೂಟರ್ ಬ್ಲಾಸ್ಟ್ ಆಗುವ ಮೊದಲು ಹೊಗೆ ಕಾಣಿಸಿಕೊಂಡಿದೆ. ಈ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿ ತಂದೆ, ಮಗಳು ಹಾಗೂ ನಾಯಿ ಅಲ್ಲಿಂದ ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಈ ಘಟನೆ ಚೀನಾದ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಈ ಘಟನೆ ಭಾನುವಾರ ಸಂಜೆ ಸುಮಾರು 5.30ಕ್ಕೆ ನಡೆದಿದೆ. ಸದ್ಯ ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಡಿಯೋದಲ್ಲಿ ತಂದೆ, ಮಗಳು ಹಾಗೂ ನಾಯಿ ಸ್ಕೂಟರ್ ಬಳಿ ಇದ್ದರು. ಆಗ ಚಾರ್ಜ್ ಹಾಕಿದ ಸ್ಕೂಟರ್ ನಿಂದ ಜೋರಾಗಿ ಶಬ್ಧವೊಂದು ಕೇಳಿಸಿದೆ. ತಂದೆ ಶಬ್ಧ ಏನೆಂದು ನೋಡಲು ಹೋದಾಗ ಸ್ಕೂಟರ್ ನಿಂದ ಹೊಗೆ ಬರುತ್ತಿತ್ತು. ಅದನ್ನು ಕಂಡ ತಂದೆ ತನ್ನ ಮಗಳು ಹಾಗೂ ನಾಯಿಯನ್ನು ಕರೆದುಕೊಂಡು ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡರು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿ ಆಗಿಲ್ಲ. ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.