ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರದಲ್ಲಿ ಉಗ್ರ ಸಂಘಟನೆಯ ಸದಸ್ಯರು ಭಾಗಿಯಾಗಿದ್ದಾರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ಘಟನೆ ನಡೆದ ಸಮಯದಲ್ಲಿ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಕರೆ ಮತ್ತು ಮಾಹಿತಿಗಳು ರವಾನೆಯಾದ ಹಿನ್ನೆಲೆಯಲ್ಲಿ ಈ ಅನುಮಾನ ಹುಟ್ಟು ಹಾಕಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್
Advertisement
Advertisement
ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಊಹೆಗಿಂತಲೂ ದೊಡ್ಡ ಲಿಂಕ್ ಇರುವುದು ಕಾಣಿಸಿದೆ. ಬಂಧನಕ್ಕೆ ಒಳಗಾದವರ ವಿಚಾರಣೆ ವೇಳೆ ಬೇರೆ ರಾಜ್ಯದ ವ್ಯಕ್ತಿಗಳ ಜೊತೆ ಸಂಬಂಧ ಇರುವುದು ಗೊತ್ತಾಗಿದೆ.
Advertisement
ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯ ವೇಳೆ ಬೇರೆ ರಾಜ್ಯದ ಲಿಂಕ್‍ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ನೀಡಲಾಗಿತ್ತು. ಈ ಕಾರಣಕ್ಕೆ ಈ ಪ್ರಕರಣವನ್ನು ಸರ್ಕಾರ ಎನ್‍ಐಎಗೆ ನೀಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ದಿವ್ಯ ಹಾಗರಗಿಗು ಬಿಜೆಪಿಗೂ ಸಂಬಂಧ ಇಲ್ಲ: ಆರ್. ಅಶೋಕ್
Advertisement
ಸದ್ಯಕ್ಕೆ ಹುಬ್ಬಳ್ಳಿ ಸ್ಥಳೀಯ ಪೊಲೀಸರಿಂದ ತನಿಖೆಗೆ ನಡೆಯುತ್ತಿದ್ದು, ಕೆಲ ದಿನಗಳಲ್ಲಿ ಸರ್ಕಾರ ಪ್ರಕರಣವನ್ನು ಎನ್‍ಐಗೆ ವರ್ಗಾಯಿಸುವ ಸಾಧ್ಯತೆಯಿದೆ.