DavanagereDistrictsKarnatakaLatestMain Post

ದಿವ್ಯ ಹಾಗರಗಿಗು ಬಿಜೆಪಿಗೂ ಸಂಬಂಧ ಇಲ್ಲ: ಆರ್. ಅಶೋಕ್

ದಾವಣಗೆರೆ: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ದಿವ್ಯ ಹಾಗರಗಿ ಅವರಿಗೂ ಬಿಜೆಪಿಗೂ ಸಂಬಂಧ ಇಲ್ಲ. ಹೀಗಂತ ಅಲ್ಲಿನ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ದಿವ್ಯ ಹಾಗರಗಿಗು ಬಿಜೆಪಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಅವರು ನಮ್ಮ ಪಕ್ಷದ ಕಾರ್ಯಕರ್ತೆ ಅಲ್ಲ ಎಂದು ನಮ್ಮ ಬಿಜೆಪಿ ಜಿಲ್ಲಾಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷದ ಸದಸ್ಯರಾಗಬೇಕಂದ್ರೆ ಸಾಕಷ್ಟು ನಿಯಮಗಳಿವೆ. ಆ ಮೂಲಕ ಸದಸ್ಯತ್ವ ಪಡೆಯಬೇಕು. ಆದರೆ ಅವರು ನಮ್ಮ ಪಕ್ಷದ ಸದಸ್ಯರಲ್ಲ. ನಮ್ಮ ಪಕ್ಷದಿಂದ ಯಾರನ್ನೂ ನಾಮನಿರ್ದೇಶನ ಮಾಡಿಲ್ಲ. ಮುಖ್ಯಮಂತ್ರಿ ವಿವೇಚನಾಧಿಕಾರದಲ್ಲಿ ಯಾರನ್ನು ಬೇಕಾದರೂ ನಾಮನಿರ್ದೇಶನ ಮಾಡಬಹುದು ಎಂದು ಜಾರಿಕೊಂಡರು. ಇದನ್ನೂ ಓದಿ: ಭಾರತ ಶ್ರೇಷ್ಠ ವೈವಿಧ್ಯತೆ ದೇಶ, ಎಲ್ಲರ ಬಗ್ಗೆಯೂ ಸಹಿಷ್ಣುತೆ ಹೊಂದಬೇಕು – ಅಲಹಾಬಾದ್ ಹೈಕೋರ್ಟ್

ಈಶ್ವರಪ್ಪನವರು ಮೇಲ್ನೋಟಕ್ಕೆ ತಪ್ಪಿತಸ್ಥರು. ಈ ಪ್ರಕರಣದಲ್ಲಿ ಸಂತೋಷ್ ಪಾಟೀಲ್ ಕೂಡ ಮೊದಲು ಕಾಂಗ್ರೆಸ್‍ನಲ್ಲಿದ್ದವರು ಎಂಬ ಬಗ್ಗೆ ಮಾಹಿತಿ ಇದೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಜಾಸ್ತಿ ಮಾತನಾಡುವುದಕ್ಕೆ ಆಗುವುದಿಲ್ಲ. ಬೇರೆಯವರು ಕಾಂಟ್ರಾಕ್ಟರ್ ಮಾಡಿದ್ದವರು, ಅವರ ಕೈಕೆಳಗೆ ಸಬ್ ಕಂಟ್ರಾಕ್ಟರ್ ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ದುಡ್ಡು ಹಾಕಿರುವವರು ಬೇರೆ, ಕೆಲಸ ಮಾಡಿರುವುದಕ್ಕೆ ಹಣ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದರು.

Leave a Reply

Your email address will not be published.

Back to top button