ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ರಕ್ತ ಚೆಲ್ಲಿದೆ.
ಹೌದು. ಪ್ರೀತಿ ನಿರಾಕರಿಸಿದ್ದಕ್ಕರ ಯುವತಿಯ ಮನೆಗೆ ನುಗ್ಗಿ ಯುವಕ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯಲ್ಲಿ ನಡೆದ ಎರಡನೇ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೆಷ್ಟು ಹೆಣ್ಣು ಮಕ್ಕಳು ಬಲಿಯಾಗಬೇಕು ಎಂದು ಜನ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇತ್ತ ಅಂಜಲಿ ಸಹೋದರಿ ಸಂಜನಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಆರೋಪಿಯನ್ನು ನಾನೇ ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ಧ ಅಂತ ಆಕ್ರೋಶ ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಆರು ಹೆಣ್ಣು ಮಕ್ಕಳ ಸಾವಾಗಿದೆ. ಸಾಕಾ ನೀವು ನ್ಯಾಯ ಕೊಡಿಸೋಕೆ. ಇನ್ನೂ ಎಷ್ಟು ಬಲಿ ಬೇಕು. ಈಗ ಎರಡು ಸಾವು ಆಗಿದೆ ಇನ್ನೂ ನಾಲ್ಕು ಜನ ಸಾಯುತ್ತೀವಿ. ನಾವು ವಿಷ ತೆಗೆದುಕೊಂಡು ಸಾಯುತ್ತೇವೆ. ಹಾಗಾದ್ರೂ ನಮಗೆ ನ್ಯಾಯ ನೀಡಿ ಎಂದು ಕಿಡಿಕಾರಿದ್ದಾರೆ.
ಅಂಜಲಿ ಮತ್ತು ನೇಹಾ ಇಬ್ಬರ ನಮಗೆ ಅಕ್ಕಂದಿರು. ಅವರ ಸಾವಿಗೆ ನ್ಯಾಯ ಬೇಕು. ಚೆನ್ನಮ್ಮ ಸರ್ಕಲ್ ನಲ್ಲಿ ನಿಲ್ಲಿಸಿ ಫಯಾಜ್ ಮತ್ತು ವಿಶ್ವನನನ್ನು ಎನ್ ಕೌಂಟರ್ ಮಾಡಬೇಕು. ಇಲ್ಲದಿದ್ದರೆ ಅವರನ್ನು ಹುಬ್ಬಳ್ಳಿ ಜನರ ಕೈಗೆ ತಂದುಕೊಡಿ ಎಂದು ಅಂಜಲಿ ಕುಟುಂಬಸ್ಥರು ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.