ಹುಬ್ಬಳ್ಳಿ: ಹುಬ್ಬಳ್ಳಿ ಮೂಲದ ಪ್ರಿಯಾಂಕ ಕೊಲವೇಕರ ಎಂಬ ರೂಪದರ್ಶಿ ಇಂಡಿಯಾ ಟಾಪ್ ಮಾಡೆಲ್ಸ್-2022 ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತ ಕಿರೀಟವನ್ನು ತಮ್ಮ
ಮುಡಿಗೇರಿಸಿಕೊಂಡಿದ್ದಾರೆ.
ಮೇ 29ರಂದು ದಿಲ್ಲಿಯಲ್ಲಿ ಸಂದೀಪ್ ಗೋಸ್ವಾಮಿ, ಸೋನಿಯಾ ಖಟಾನಾ ಆಯೋಜಿಸಿದ್ದ ಪ್ರತಿಷ್ಠಿತ ರೂಪದರ್ಶಿಗಳ ಸ್ಪರ್ಧೆಯಲ್ಲಿ ಪ್ರಿಯಾಂಕ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಈ ಹಿಂದೆ ಗೋವಾದಲ್ಲಿ ನಡೆದ 2019ರ ರಾಯಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದರು. 2018ರಲ್ಲಿ ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್ ಎಲೈಟ್, 2016ರಲ್ಲಿ ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್, 2015 ಮಿಸ್ ಇಂಡಿಯಾ ಅಡ್ವೆಂಚರ್ ಅವಾರ್ಡ್‍ಗಳನ್ನು ಸಹ ಗೆದ್ದಿದ್ದಾರೆ. ಇದನ್ನೂ ಓದಿ: ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ
Advertisement
Advertisement
ಪ್ರಿಯಾಂಕ ಮೂಲತಃ ಕಾರವಾರದಲ್ಲಿ ಹುಟ್ಟಿ ಬೆಳೆದಿದ್ದು, ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ. ಅವರ ತಂದೆ ಗಣಪತಿ ಅಕ್ಕಸಾಲಿಗರಾಗಿದ್ದು, ತಾಯಿ ಮಂಗಳ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಯಾರ ಸಹಾಯವಿಲ್ಲದೆ, ಫಿಟ್ನೆಸ್, ಕಾಸ್ಟ್ಯೂಮ್, ವಾಕಿಂಗ್ ಸ್ಟೈಲ್ ಎಲ್ಲವನ್ನು ಇಂಟರ್‌ನೆಟ್‍ನಲ್ಲಿ ನೋಡಿ ಪ್ರಿಯಾಂಕ ಮಾಡೆಲಿಂಗ್ ಕಲಿತುಕೊಂಡಿದ್ದಾರೆ. ಇದನ್ನೂ ಓದಿ: 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ
Advertisement
ಪ್ರಾಣಿ ಪ್ರಿಯರಾಗಿರುವ ಪ್ರಿಯಾಂಕ ಹುಬ್ಬಳ್ಳಿಯಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ 10ಗಂಟೆವೆರೆಗೆ ವಿದ್ಯಾನಗರ, ಗೋಕುಲ ರಸ್ತೆಯಲ್ಲಿರುವ ಸುಮಾರು 50 ರಿಂದ 70 ಬೀದಿ ನಾಯಿಗಳಿಗೆ ಆಹಾರ ಹಾಕುವ ಹವ್ಯಾಸಹೊಂದಿದ್ದಾರೆ. ಇದರ ಜೊತೆಗೆ ಗೋವುಗಳಿಗೆ, ಬೀದಿ ನಾಯಿ ಸೇರಿದಂತೆ ಯಾವುದೇ ಪ್ರಾಣಿಗಳ ಸಂಕಷ್ಟಕ್ಕೆ ಮರಗುವ ಗುಣವನ್ನು ಪ್ರಿಯಾಂಕ ಹೊಂದಿದ್ದಾರೆ. ಇವರ ಈ ಸೇವೆಯನ್ನು ಮೆಚ್ಚಿ 2018ರಲ್ಲಿ ಅನಿಶ್ ಚಿಂಚೊರೆ ಮೆಮೊರಿಯಲ್ ಫೌಂಡೆಷನ್ ವತಿಯಿಂದ ಆನಿಮಲ್ ಆಕ್ಟಿವಿಸ್ಟ್ ಎಂಬ ಅವಾರ್ಡ್ ಸಹ ದೊರಕಿದೆ.