ಮುಂಬೈ: ಬಿಡುಗಡೆಯಾದ 1 ತಿಂಗಳಿನಲ್ಲಿ ಎಚ್‍ಟಿಸಿ ಕಂಪೆನಿಯ ದುಬಾರಿ ಬೆಲೆಯ ಅಲ್ಟ್ರಾ ಯು ಫೋನಿನ ಬೆಲೆ 7 ಸಾವಿರ ರೂ. ಕಡಿಮೆಯಾಗಿದೆ. ಎಚ್‍ಟಿಸಿ ಯು ಆಲ್ಟ್ರಾ ಫೋನ್ ಈ ಹಿಂದೆ 59,990 ರೂ. ಬೆಲೆಯಲ್ಲಿ ಮಾರ್ಚ್‍ನಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನನ್ನು 52,990 ರೂ. ನೀಡಿ ಖರೀದಿಸಬಹುದು.
ಎಚ್‍ಟಿಟಿ ಡಿಸೈರ್ 10 ಪ್ರೋ ಬಿಡುಗಡೆಯಾದಾಗ 26,490 ರೂ. ನಿಗದಿಯಾಗಿತ್ತು. ಆದರೆ ಈಗ ಈ ಫೋನ್ 23,990 ರೂ.ಗೆ ಲಭ್ಯವಿದೆ. ಎರಡೂ ಫೋನ್‍ಗಳು ಎಚ್‍ಟಿಸಿ ಇಂಡಿಯಾ ಸ್ಟೋರ್‍ನಲ್ಲಿ ಲಭ್ಯವಿದ್ದು, ಒಂದು ತಿಂಗಳು ಮಟ್ಟಿಗೆ ದರವನ್ನು ಕಡಿತಗೊಳಿಸಲಾಗಿದೆ ಎಂದು ಎಚ್‍ಟಿಸಿ ತಿಳಿಸಿದೆ.
Advertisement
ಈ ಎರಡು ಫೋನ್‍ಗಳು ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್ ಹೊಂದಿದ್ದು, ಎರಡು ಸಿಮ್ ಕಾರ್ಡ್ ಆಥವಾ ಒಂದು ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಗಳನ್ನು ಹಾಕಬಹುದಾಗಿದೆ.
Advertisement
ಇದನ್ನೂ ಓದಿ: ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?
Advertisement
ಎಚ್‍ಟಿಸಿ ಆಲ್ಟ್ರಾ ಯು ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಲ್ಪೇ:
ಹೈಬ್ರಿಡ್ ಡ್ಯುಯಲ್ ಸಿಮ್, 162.4*79.8*8 ಮಿಮಿ ಗಾತ್ರ, 170 ಗ್ರಾಂ ತೂಕ, 5.7 ಇಂಚಿನ ಸೂಪರ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(1440*2560 ಪಿಕ್ಸೆಲ್, 513 ಪಿಪಿಐ) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5
Advertisement
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ ಕ್ವಾಡ್‍ಕೋರ್ ಪ್ರೊಸೆಸರ್, ಎರಡನೇ ಸಿಮ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿ ವಿಸ್ತರಣೆ, 64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರಾಮ್
ಇದನ್ನೂ ಓದಿ: 2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ
ಕ್ಯಾಮೆರಾ, ಬ್ಯಾಟರಿ:
ಹಿಂದುಗಡೆ 12 ಎಂಪಿ ಆಲ್ಟ್ರಾಪಿಕ್ಸೆಲ್ ಕ್ಯಾಮೆರಾ, ಮುಂದುಗಡೆ, 16 ಎಂಪಿ ಕ್ಯಾಮೆರಾ, 3000 ಎಂಎಎಚ್ ಬ್ಯಾಟರಿ
ಎಚ್‍ಟಿಸಿ ಡಿಸೈರ್ 10 ಪ್ರೋ ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ:
ಡ್ಯುಯಲ್ ಹೈ ಬ್ರಿಡ್ ಸಿಮ್, 156.5*76*7.9 ಮಿ.ಮೀ ಗಾತ್ರ, 165 ಗ್ರಾಂ ತೂಕ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಟಿವ್ ಟಚ್‍ಸ್ಕ್ರೀನ್(1080*1920 ಪಿಕ್ಸೆಲ್, 400 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ ಮಾರ್ಶ್‍ಮೆಲೋ 6. ಓಎಸ್, ಮೀಡಿಯಾಟೆಕ್ ಆಕ್ಟೋ ಕೋರ್ ಪ್ರೊಸೆಸರ್, ಮಾಲಿ ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣ ಸಾಮಥ್ರ್ಯ, 64 ಜಿಬಿ ಆಂತರಿಕ, ಮೆಮೊರಿ, 4ಜಿಬಿ ರಾಮ್,
ಕ್ಯಾಮೆರಾ, ಬ್ಯಾಟರಿ:
ಹಿಂದುಗಡೆ 20 ಎಂಪಿ, ಮುಂದುಗಡೆ 13 ಎಂಪಿ ಕ್ಯಾಮೆರಾ, 3000 ಎಂಎಎಚ್ ಬ್ಯಾಟರಿ
ಇದನ್ನೂ ಓದಿ:ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?