ಬಾಲಿವುಡ್ನ ಗ್ರೀಕ್ ಗಾಡ್ ಹೃತಿಕ್ ರೋಷನ್ ಇಷ್ಟು ದಿನ ವಯಕ್ತಿಕ ವಿಚಾರಗಳಿಂದ ಸುದ್ದಿಯಾಗುತ್ತಿದ್ದರು. ಆದರೆ ಈಗ ತಮ್ಮ ಫ್ಯಾಮಿಲಿಯಿಂದ ಸ್ಪೆಷಲ್ ವ್ಯಕ್ತಿಯನ್ನು ಅಭಿಮಾನಿಗಳಿಗೆ ಪರಿಚಯ ಮಾಡಿದ್ದಾರೆ. ಇದೀಗ ಹೃತಿಕ್ ರೋಷನ್ ಕಸಿನ್ ಸಹೋದರಿ ಪಶ್ಮಿನಾ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ಹೇಳಿಕೊಂಡಿದ್ದಾರೆ.
ಹೃತಿಕ್ ರೋಷನ್ ಕುಟುಂಬದಿಂದ ಹೃತಿಕ್ ಕಸಿನ್ ಸಹೋದರಿ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ವಿಚಾರವನ್ನ ಹೃತಿಕ್ ಸೋಷಿಯಲ್ ಮೀಡಿಯಾ ರಿವೀಲ್ ಮಾಡಿ, ಸಹೋದರಿಗೆ ವಿಶ್ ಮಾಡಿದ್ದಾರೆ.`ಹಾಯ್ ಪಾಶ್,ನೀನು ಕಳೆದು ಹೋದ ದಿನಗಳು ನಿನಗೆ ನೆನಪು ಇದ್ಯಾ? ನಿನ್ನ ಕಣ್ಣುಗಳಲ್ಲಿನ ಹುಡುಕಾಟ ನನಗೆ ನೆನಪಿದೆ, ಜೀವನ ನಡೆಸಲು ಹಾದಿ ಹುಡುಕುತ್ತಿದ್ದೆ. ಈಗ ನೋಡು ಜೀವನದ ಆಂಕರ್ ನಿನ್ನ ಕೈಗೆ ಸಿಕ್ಕಿದೆ ನಿನ್ನ ಕೈಯಲ್ಲಿದೆ ನಿನ್ನೊಳಗೆ ಇದೆ. ನಿನ್ನ ಜೀವನಕ್ಕೆ ನೀನೇ ಆಂಕರ್ ನಿನ್ನ ಜರ್ನಿಗೆ ನೀನೇ ಕಾರಣ ಅದು ನೆನಪಿಟ್ಟುಕೊ ಹೆಮ್ಮೆಯಿಂದ ಜೀವನ ಮಾಡು. ನಿನ್ನ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಹೃತಿಕ್ ಬರೆದುಕೊಂಡಿದ್ದಾರೆ.
View this post on Instagram
ಹೃತಿಕ್ ಫೋಟೋ ಶೇರ್ ಮಾಡಿ, ಇಷ್ಕ ವಿಷ್ಕ ರಿಬೌಂಡ್ ತಂಡಕ್ಕೆ ನನ್ನ ಶುಭಾಶಯಗಳು. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವೆ. ಕಿಲ್ ಇಟ್ ಎಂದಿದ್ದಾರೆ ಹೃತಿಕ್. ಕೆಳವು ದಿನಗಳ ಹಿಂದೆ ಪ್ರಶ್ಮಿನಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಸಿನಿಮಾ ಪ್ರಾಜೆಕ್ಟ್ನಲ್ಲಿ ನಟಿಸುತ್ತಿರುವುದಾಗಿ ರಿವೀಲ್ ಮಾಡಿದ್ದರು. ಈಗ ಇಷ್ಕ್ ವಿಷ್ಕ್ ರಿಬೌಂಡ್ ಸೀಕ್ವೇಲ್ ಚಿತ್ರದ ಮೂಲಕ ಬಿಟೌನ್ಗೆ ಲಗ್ಗೆ ಇಡ್ತಿದ್ದಾರೆ. ಇದನ್ನೂ ಓದಿ: ನಟಿ ಶಹನಾ ಆತ್ಮಹತ್ಯೆ : ಡೈರಿಯಲ್ಲಿ ಬರೆದಿದ್ದಾಳೆ ಬೆಚ್ಚಿಬೀಳಿಸುವ ಸಂಗತಿ
ಇನ್ನು ಹೃತಿಕ್ ಮತ್ತು ಅವರ ಮಾಜಿ ಪತ್ನಿ ಸುಸೇನ್ ಖಾನ್ ಈಗ ತಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದಾರೆ. ಹೃತಿಕ್ ಹೆಸರು ಸಬಾ ಆಜಾದ್ ಜೊತೆ ಕೇಳಿಬರುತ್ತಿದೆ. ಅದೇ ಸಮಯದಲ್ಲಿ, ಸುಸೇನ್ ಜೀವನದಲ್ಲಿ ಆರ್ಸ್ಲಾನ್ ಗೋನಿ ಬಂದಿದ್ದಾರೆ. ಹೃತಿಕ್ ರೋಷನ್ ಮತ್ತು ಸುಸೇನ್ ಇಬ್ಬರೂ ಪರಸ್ಪರ ಸಂತೋಷವಾಗಿರುವಂತೆ ತೋರುತ್ತಿದೆ. ಒಂದೇ ಪಾರ್ಟಿಯಲ್ಲಿ ಇಬ್ಬರೂ ತಮ್ಮ ತಮ್ಮ ಹೊಸ ಪಾರ್ಟ್ನರ್ ಜೊತೆ ಎಂಜಾಯ್ ಮಾಡುತ್ತಿರುವ ಅವರ ಫೋಟೋಗಳು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.