ಪ್ರತಿ ಬಾರಿ ಒಂದೇ ರೀತಿಯ ಫಿಶ್ ಫ್ರೈ ಮಾಡಿ ಬೇಜಾರಾಗಿರುತ್ತೆ. ಹೀಗಾಗಿ ಈ ಬಾರಿ ಅತ್ಯಂತ ಕ್ರಿಪ್ಸಿ ಹಾಗೂ ರುಚಿಕರವಾದ ರೀತಿಯಲ್ಲಿ ಫ್ರೈ ಮಾಡಿ. ತಮಿಳುನಾಡಿನ ಚೆಟ್ಟಿನಾಡ್ ಪ್ರದೇಶದ ಫಿಶ್ ಫ್ರೈ ಫುಲ್ ಫೇಮಸ್. ಅದೇ ರೀತಿಯಲ್ಲಿ ನಿಮ್ಮ ಮನೆಯಲ್ಲಿಯೇ ಫಿಶ್ ಫ್ರೈ ಮಾಡುವ ರೆಸಿಪಿಯನ್ನ ಇಲ್ಲಿ ಹೇಳಿಕೊಡಲಾಗುತ್ತೆ.
Advertisement
ಬೇಕಾಗುವ ಸಾಮಗ್ರಿಗಳು:
* ಸುರ್ಮೈ ಫಿಲೆಟ್‍ಗಳು(ರಾಜ ಮೀನು) – 2
* ಎಣ್ಣೆ – 2 ಚಮಚ
* ಬೆಳ್ಳುಳ್ಳಿ – 7 ರಿಂದ 8
* ಲವಂಗ – 1
* ಶುಂಠಿ – ಸ್ವಲ್ಪ
* ಜೀರಿಗೆ – 1 ಟೀಸ್ಪೂನ್
* ಕೊತ್ತಂಬರಿ ಬೀಜ – 2 ಟೀಸ್ಪೂನ್
* ಕರಿಮೆಣಸು – 2 ಟೀಸ್ಪೂನ್
Advertisement
* ಸಾಸಿವೆ – 1/2 ಟೀಸ್ಪೂನ್
* ಕರಿಬೇವಿನ ಎಲೆಗಳು – 9-10
* ಕತ್ತರಿಸಿದ ಟೊಮೆಟೊ – 1/2 ಕಪ್
* ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
* ಕಾರ್ನ್‍ಫ್ಲೋರ್ – 1 ಕಪ್
* ಅರಿಶಿನ ಪುಡಿ – 2 ಟೀಸ್ಪೂನ್
* ಹುಣಸೆ ನೀರು – 5 ಕಪ್
* ನಿಂಬೆ ತುಂಡುಗಳು, ರುಚಿಗೆ ಬೇಕಾದಷ್ಟು ಉಪ್ಪು
Advertisement
ಮಾಡುವ ವಿಧಾನ:
* ಮೀನಿನ ತುಂಡುಗಳನ್ನು ಸಮಾನ ತುಂಡುಗಳಾಗಿ ಕತ್ತರಿಸಿ.
* ಬಾಣಲೆಯಲ್ಲಿ ಒಣ ಹುರಿದ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಫೆನ್ನೆಲ್, ಕೊತ್ತಂಬರಿ ಬೀಜ, ಕರಿಮೆಣಸು, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
Advertisement
* ಫ್ರೈ ಮಾಡಿದ ಮಿಶ್ರಣಕ್ಕೆ ಕತ್ತರಿಸಿದ ಟೊಮೆಟೊ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಹುಣಸೆ ನೀರನ್ನು ಸೇರಿಸಿ ಮಸಾಲೆ ರೆಡಿ ಮಾಡಿ.
* ಮೀನಿನ ಮೇಲೆ ಸ್ವಲ್ಪ ಕಾರ್ನ್‍ಫ್ಲೋರ್ ಸಿಂಪಡಿಸಿ. ಮೀನುಗಳ ತುಂಡುಗಳನ್ನು ಮಸಾಲೆಯೊಂದಿಗೆ ಚೆನ್ನಾಗಿ ಡಿಪ್ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ. (ಕಾರ್ನ್‍ಫ್ಲೋರ್ ಮಸಾಲಾವನ್ನು ಅಂಟಿಸಲು ಸಹಾಯ ಮಾಡುತ್ತೆ)
* 15-20 ನಿಮಿಷಗಳ ಕಾಲ ತಣ್ಣಗಾಗಲು ಬಿಟ್ಟು, ಅದಕ್ಕೆ ನಿಂಬೆ ರಸವನ್ನು ಸೇರಿಸಿ.