ರುಚಿಯಾದ ಹಾಗೂ ಸಿಹಿಯಾದನ್ನು ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಬೂದುಗುಂಬಳಕಾಯಿ ಹಲ್ವಾ ಮಾಡಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಬೂದು ಕುಂಬಳಕಾಯಿ- 2 ಕಪ್
* ತುಪ್ಪ- ಅರ್ಧ ಕಪ್
* ಸಕ್ಕರೆ- 3 ಕಪ್
* ಒಣ ದ್ರಾಕ್ಷಿ, ಗೋಡಂಬಿ- ಸ್ವಲ್ಪ
* ಏಲಕ್ಕಿ -2
* ಹಾಲು- ಅರ್ಧ ಕಪ್
* ಕೇಸರಿ- ಸ್ವಲ್ಪ
Advertisement
Advertisement
ಮಾಡುವ ವಿಧಾನ:
Advertisement
* ಕೆಸರಿಯ ದಳಗಳನ್ನು ಹಾಲಿನಲ್ಲಿ ಸೇರಿಸಿ ಮತ್ತು ಸ್ವಲ್ಪ ಹೊತ್ತು ಅದನ್ನು ಹಾಲಿನಲ್ಲಿ ನೆನೆಯಲು ಬಿಡಿ.
* ಬೂದಗುಂಬಳ ಕಾಯಿಯನ್ನು ಕತ್ತರಿಸಿ ತುರಿದುಕೊಳ್ಳಿ.
* ಒಂದು ಬಾಣಲೆಗೆ ತುರಿದ ಬೂದುಗುಂಬಳ ಕಾಯಿಯನ್ನು ಸೇರಿಸಿ, ಬೂದಗುಂಬಳಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶ ಇರುತ್ತದೆ. ಆ ನೀರು ಒಣಗುವವರೆಗೂ ಅದನ್ನು ಚೆನ್ನಾಗಿ ಹುರಿಯಿರಿ. ತದನಂತರದಲ್ಲಿ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ
* ಇನ್ನು ಬಾಣಲೆಗೆ ಕೇಸರಿ ಮಿಶ್ರಿತ ಹಾಲನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
* ಈ ಮಿಶ್ರಣಕ್ಕೆ ತುಪ್ಪ, ಗೋಡಂಬಿ, ದ್ರಾಕ್ಷಿ ಸೇರಿಸಿ. ಇವುಗಳನ್ನು ಕಂದುಬಣ್ಣ ಆಗುವವರೆಗೂ ಹುರಿಯಿರಿ. ನಂತರದಲ್ಲಿ ಅದನ್ನು ಹಲ್ವಾಕ್ಕೆ ಹಾಕಿ ಮಿಶ್ರಣ ಮಾಡಿ. ಈಗ ಇನ್ನೂ ಸ್ವಲ್ಪ ತುಪ್ಪ ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ಹಲ್ವಾ ಸವಿಯಲು ಸಿದ್ಧವಾಗುತ್ತದೆ.