ಎಲ್ಲರ ಮನೆಲೂ ಮಶ್ರೂಮ್ ಗ್ರೇವಿ, ಮಶ್ರೂಮ್ ಮಸಾಲೆ, ಮಶ್ರೂಮ್ ಬಿರಿಯಾನಿ ಹೀಗೆ ರುಚಿ ರುಚಿಯ ಖಾದ್ಯಗಳ ಸವಿಯುವುದು ಸರ್ವೇ ಸಾಮಾನ್ಯ. ಆದರೆ ಈ ಮಶ್ರೂಮ್‌ನಿಂದ ಮಾಡುವಂತಹ ಅದ್ಭುತ ರುಚಿಯ ಚಟ್ನಿ ಬಹುಶಃ ಯಾರು ಮಾಡಿರಲಿಕ್ಕಿಲ್ಲ. ಈ ಚಟ್ನಿ ಬಹಳ ರುಚಿಕರ.. ಮನೆಯಲ್ಲಿ ಮಾಡುವ ದೋಸೆ, ಇಡ್ಲಿ ಹಾಗೆ ಯಾವುದೇ ತಿಂಡಿಗೂ ಈ ಚಟ್ನಿ ಸಕತ್ ಆಗಿರುತ್ತೆ. ಹಾಗಾದ್ರೆ ಈ ಮಶ್ರೂಮ್ ಚಟ್ನಿ ಮಾಡೋದು ಹೇಗೆ ಅಂತ ತಿಳಿದುಕೊಳ್ಳೋಣ..
ಮಶ್ರೂಮ್ ಚಟ್ನಿಗೆ ಏನೆಲ್ಲಾ ಬೇಕು?
* ಮಶ್ರೂಮ್
* ಈರುಳ್ಳಿ
* ಒಣ ಮೆಣಸು
* ಎಣ್ಣೆ
* ಬೆಳ್ಳುಳ್ಳಿ
* ಶುಂಠಿ
* ಹುಣಸೆ ಹಣ್ಣು
* ಉಪ್ಪು
* ತೆಂಗಿನಕಾಯಿ
* ಸಾಸಿವೆ
* ಕಡಲೆ ಹಿಟ್ಟು
* ಅರಿಶಿಣ
* ಕರಿಬೇವು
ಮಶ್ರೂಮ್ ಚಟ್ನಿ ಮಾಡೋದು ಹೇಗೆ?
ಮೊದಲು ಫ್ರೆಶ್ ಆಗಿರುವ ಮಶ್ರೂಮ್‌ನ್ನು ಚೆನ್ನಾಗಿ ತೊಳೆದು ಕೊಳ್ಳಬೇಕು. ಬಳಿಕ, ಕತ್ತರಿಸಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಬೇಕು. ಈಗ ಬಾಣಲೆ ಒಲೆ ಮೇಲಿಟ್ಟು 1 ಸ್ಪೂನ್ ಎಣ್ಣೆ ಹಾಕಿ, ಒಣ ಮೆಣಸು, ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಬೇಕು. ಹಾಗೆ ಕತ್ತರಿಸಿಕೊಂಡಿರುವ ಮಶ್ರೂಮ್, ಬೆಳ್ಳುಳ್ಳಿ, ಶುಂಠಿ ಹಾಗೆ ಹುಣಸೆ ಹುಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ನಂತರ ಸ್ಟೌ ಆಫ್ ಮಾಡಿ, ತಣ್ಣಗಾಗಲು ಬಿಡಬೇಕು.
ತಣ್ಣಗಾದ ಬಳಿಕ ಮಸಾಲೆಯನ್ನು ಮಿಕ್ಸಿಗೆ ಹಾಕಿ ಅದಕ್ಕೆ ತೆಂಗಿನಕಾಯಿ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈಗ ಈ ಚಟ್ನಿಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಬೇಕು. ನಂತರ ಸಾಸಿವೆ, ಕರಿಬೇವು, ಅರಶಿಣ ಪುಡಿ, ದನಿಯ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು. ನಂತರ ಈ ಒಗ್ಗರಣೆಯನ್ನು ಬೌಲ್‌ನಲ್ಲಿರುವ ಚಟ್ನಿಗೆ ಹಾಕಿ ಮಿಕ್ಸ್ ಮಾಡಿದ್ರೆ ಮಶ್ರೂಮ್ ಚಟ್ನಿ ಪರ್ಫೆಕ್ಟ್ ಆಗಿ ರೆಡಿ ಆಗಿರುತ್ತದೆ!