ಸಿಹಿ ತಿನಿಸು ಹಾಗೂ ಸವಿ, ಸವಿ ಹಲ್ವಾ ಇಷ್ಟ ಪಡೋರಿಗೆ ಇವತ್ತು ಹೆಸರು ಬೇಳೆ ಹಲ್ವಾ ಮಾಡೋದನ್ನ ಹೇಳ್ಕೊಡ್ತೀನಿ. ಇದು ಮಕ್ಕಳಿಗೆ, ವಯಸ್ಕರಿಗೆ ಎಲ್ಲರಿಗೂ ಇಷ್ಟ ಆಗೋ ಸಕತ್ ಟೇಸ್ಟೀ ಸ್ವೀಟ್! ಸಂಭ್ರಮದ ಸಮಯದಲ್ಲಿ ಬಾಯಿ ಸಿಹಿ ಮಾಡೋಕೆ ಇದು ಬೆಸ್ಟ್.
ಬೇಕಾಗುವ ಪದಾರ್ಥಗಳು:
ಹೆಸರು ಬೇಳೆ – 3 ಬಟ್ಟಲು
ತುಪ್ಪ – 3 ಬಟ್ಟಲು
ಸಕ್ಕರೆ – 2 ಬಟ್ಟಲು
ಹಾಲು – 5 ಬಟ್ಟಲು
ಏಲಕ್ಕಿ ಪುಡಿ – ¾ ಟೀ ಚಮಚ
2 ಟೇಬಲ್ ಚಮಚ ಬಿಸಿ ನೀರಿನಲ್ಲಿ ನೆನೆಸಿದ ಕೇಸರಿ – 10 ಎಳೆ
ಗೋಡಂಬಿ – 4 ಟೇಬಲ್ ಚಮಚ
ಬಾದಾಮಿ ಮತ್ತು ದ್ರಾಕ್ಷಿ – ತಲಾ 2 ಟೇಬಲ್ ಚಮಚ
ಹೆಸರು ಬೇಳೆ ಹಲ್ವಾ ಮಾಡೋದು ಹೇಗೆ?
1 ಹೆಸರು ಬೇಳೆಯನ್ನು ರಾತ್ರಿಯೇ ನೆನೆಸಿ. ನೀರು ಬಸಿದು, ಸಿಪ್ಪೆ ತೆಗೆದು ಸ್ವಲ್ಪ ನೀರಿನಲ್ಲಿ ರುಬ್ಬಿಕೊಳ್ಳಿ.
2. ಬಾಣಲೆಯಲ್ಲಿ 2 ಬಟ್ಟಲು ತುಪ್ಪವನ್ನು ಕಾಯಿಸಿ. ರುಬ್ಬಿದ ಪೇಸ್ಟ್‌ನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. ಸತತವಾಗಿ ಕಲಸುತ್ತಿರಬೇಕು.
3. ಪೇಸ್ಟ್ ಗುಲಾಬಿ ಬಣ್ಣಕ್ಕೆ ಬಂದಾಗ ಮತ್ತು ತುಪ್ಪ ಪ್ರತ್ಯೇಕಗೊಂಡಾಗ ಸಕ್ಕರೆ ಮತ್ತು ಹಾಲನ್ನು ಹಾಕಿ ಕಲಸಿ. ಸತತವಾಗಿ ಕಲಸುತ್ತ ಸಣ್ಣ ಉರಿಯಲ್ಲಿ ಸುಮಾರು 10 ನಿಮಿಷ ಬೇಯಿಸಬೇಕು.
4. ಈ ಮಿಶ್ರಣ ಇಂಗುವಾಗ, ಉಳಿದ ತುಪ್ಪವನ್ನು ಹಾಕಿ. 5-7 ನಿಮಿಷ ಹುರಿಯಿರಿ. ಕೇಸರಿ ಮತ್ತು ಚೂರು ಮಾಡಿರುವ ಒಣ ಹಣ್ಣುಗಳಲ್ಲಿ ಅರ್ಧ ಭಾಗವನ್ನು ಈ ಮಿಶ್ರಣಕ್ಕೆ ಹಾಕಿ ಕಲಸಿ.
5. ಅನಂತರ ಒಲೆಯಿಂದ ಇಳಿಸಿ. ಒಣ ಹಣ್ಣು ಮತ್ತು ಏಲಕ್ಕಿಯಿಂದ ಅಲಂಕರಿಸಿ. ಈಗ ನಿಮ್ಮ ಮುಂದೆ ಹೆಸರು ಬೇಳೆ ಹಲ್ವಾ ಸವಿಯಲು ರೆಡಿ.