ಮೆಂತ್ಯ ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲಿಯೂ ಇಂದು ದೇಹಕ್ಕೆ ತಂಪು. ಅದಕ್ಕೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಮೆಂತ್ಯ ಸಾಂಬಾರ್ ಮಾಡಿ ಸವಿಯಿರಿ. ಈ ಸಾಂಬಾರ್ ಮಾಡುವ ವಿಧಾನವು ತುಂಬಾ ಸುಲಭವಾಗಿರುತ್ತೆ.
Advertisement
ಬೇಕಾಗಿರುವ ಪದಾರ್ಥಗಳು:
* ಮೆಂತ್ಯ ಬೀಜಗಳು – 2 ಟೀಸ್ಪೂನ್
* ಕೆಂಪು ಮೆಣಸಿನಕಾಯಿ – 4-6
* ಕೊತ್ತಂಬರಿ ಬೀಜಗಳು – 1 ಟೀಸ್ಪೂನ್
* ಜೀರಿಗೆ ಬೀಜಗಳು – 1/4 ಟೀಸ್ಪೂನ್
* ಸಾಸಿವೆ ಬೀಜಗಳು – 1/4 ಟೀಸ್ಪೂನ್
* ತುರಿದ ತೆಂಗಿನಕಾಯಿ – 1/2 ಕಪ್
* ಹುಣಸೆಹಣ್ಣು – 1 ತುಂಡು
* ಬೆಲ್ಲ – 2 ಟೀಸ್ಪೂನ್
* ಅಡುಗೆ ಎಣ್ಣೆ – 1 ಟೀಸ್ಪೂನ್
* ರುಚಿಗೆ ತಕ್ಕಂತೆ ಉಪ್ಪು
* ಕರಿಬೇವಿನ ಎಲೆ – 5-6
* ಸಾಸಿವೆ – 5-6 ಟೀಸ್ಪೂನ್
* ಅಡುಗೆ ಎಣ್ಣೆ – 2 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಪ್ಯಾನ್‍ನಲ್ಲಿ ಕೆಂಪು ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ ಮತ್ತು ಸಾಸಿವೆ ಸೇರಿಸಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ.
* ಒಂದು ಪ್ಯಾನ್‍ಗೆ ಮೆಂತ್ಯ ಕಾಳುಗಳನ್ನು ಸೇರಿಸಿ ಗೋಲ್ಡನ್ ಬ್ರೌನ್ ಮಾಡುವವರೆಗೆ ಫ್ರೈ ಮಾಡಿ. 1 ಕಪ್ ನೀರು ಸೇರಿಸಿ ಅದನ್ನು ಕುದಿಸಿ. 10 ನಿಮಿಷ ಬೇಯಿಸಿ.
Advertisement
* ತೆಂಗಿನಕಾಯಿ ಮತ್ತು ಹುರಿದ ಮಸಾಲೆಗಳನ್ನು(ಕೆಂಪು ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಬೀಜಗಳು ಮತ್ತು ಸಾಸಿವೆ) ಮಿಕ್ಸಿ ಜಾರ್ ಹಾಕಿ ರುಬ್ಬಿಕೊಳ್ಳಿ. ಇದನ್ನೂ ಓದಿ: ರುಚಿಕರವಾದ ಟೊಮೆಟೊ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
* ರುಬ್ಬಿದ ಪೇಸ್ಟ್ ಮತ್ತು ಬೆಲ್ಲವನ್ನು ಬೇಯಿಸಿದ ಮೆಂತ್ಯ ಕಾಳುಗಳಿಗೆ ಸೇರಿಸಿ. ಅದಕ್ಕೆ ಹುಣಸೆ ಹಣ್ಣಿನಿಂದ ತೆಗೆದ ರಸವನ್ನು ಸೇರಿಸಿ. ಉಪ್ಪಿನಲ್ಲಿ ಸೇರಿಸಿ ಅದಕ್ಕೆ ಸುಮಾರು 2 ಕಪ್ ನೀರು ಸೇರಿಸಿ ಕುದಿಸಿ. ಇದನ್ನೂ ಓದಿ: ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ