ಹುರುಳಿಕಾಳು ಆರೋಗ್ಯಕರವಾದ ಪ್ರೋಟೀನ್ ಅಂಶಗಳನ್ನು ಹೊಂದಿದೆ. ಡಯಟ್‍ನಲ್ಲಿ ಇದನ್ನು ಸೇರಿಸಿದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇವತ್ತು ನಾವು ಹುರುಳಿಕಾಳಿನ ಸಾರು ಮಾಡುವ ವಿಧಾನ ತಿಳಿಯೋಣ. ಈ ಸಾರು ಮಾಡಲು ಎಷ್ಟು ಸುಲಭವಾಗಿದೆಯೋ ಅಷ್ಟು ನಾಲಿಗೆಗೆ ರುಚಿಯನ್ನು ನೀಡಿತ್ತದೆ.
Advertisement
ಬೇಕಾಗುವ ಸಾಮಾಗ್ರಿಗಳು:
* ಹುರುಳಿಕಾಳು -ಅರ್ಧ ಕಪ್
* ಟೊಮೆಟೊ -2
* ಬೆಳ್ಳುಳ್ಳಿ 3
* ನಿಂಬೆ ಹಣ್ಣು- 1 *
* ಹುಣಸೆಹಣ್ಣೂ- ಸ್ವಲ್ಪ
* ಇಂಗು ಚಿಟಿಕೆ
* ಕರಿಮೆಣಸಿನ ಪುಡಿ- 1 ಚಮಚ
* ಜೀರಿಗೆ- 1 ಚಮಚ
* ಸಾಸಿವೆ -1 ಚಮಚ
* ಒಣ ಮೆಣಸು 2
* ಕರಿಬೇವಿನ ಎಲೆ- ಸ್ವಲ್ಪ
* ಸಕ್ಕರೆ – ಅರ್ಧ ಚಮಚ
* ಅಡುಗೆ ಎಣ್ಣೆ – ಅರ್ಧ ಕಪ್
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ರುಚಿಗೆ ತಕ್ಕ ಉಪ್ಪು
Advertisement
ಮಾಡುವ ವಿಧಾನ:
* ಹುರುಳಿಕಾಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿದು ನಂತರ ಬದಿಯಲ್ಲಿ ತೆಗೆದು ಇಡಬೇಕು.
* ನಂತರ ಕುಕ್ಕರ್‍ನಲ್ಲಿ ಹಾಕಿ ಒಂದೂವರೆ ಕಪ್ ನೀರು ಹಾಕಿ ಸ್ವಲ್ಪ ಉಪ್ಪು ಸೇರಿಸಿ 3 ವಿಶಲ್ ಹಾಕಿಸಬೇಕು.
Advertisement
Advertisement
* ಹುಣಸೆಹಣ್ಣಿನಿಂದ ರಸ ಮಾಡಿ ಆ ರಸಕ್ಕೆ ಸಕ್ಕರೆ ಹಾಕಿ ಬದಿಯಲ್ಲಿಡಬೇಕು.
* ಈಗ ಹುರುಳಿಕಾಳನ್ನು ತೆಗೆದು ಜೀರಿಗೆ, ಕರಿಮೆಣಸಿನ ಪುಡಿ ಮತ್ತು ಬೆಳ್ಳುಳ್ಳಿ ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು. (ಹುರುಳಿಕಾಳು ಬೇಯಿಸಿದ ನೀರನ್ನು ತೆಗೆದಿಡಿ)
* ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಒಣಮೆಣಸನ್ನು ಮುರಿದು ಹಾಕಬೇಕು ನಂತರ ಸ್ವಲ್ಪ ಇಂಗು ಮತ್ತು ಕರಿಬೇವಿನ ಎಲೆ ಹಾಕಿ ನುಣ್ಣನೆ ಅರೆದ ಹುರುಳಿಕಾಳು ಪೇಸ್ಟ್ ಅನ್ನು ಹಾಕಿ, ಹುರುಳಿಕಾಳು ಬೇಯಿಸಿದ ನೀರನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
* ಸಾರು ಕುದಿ ಬರುವಾಗ ಹುಣಸೆಹಣ್ಣಿನ ರಸ ಹಾಕಿ 5 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ಹುರುಳಿಕಾಳಿನ ಸಾರು ಸವಿಯಲು ಸಿದ್ಧವಾಗುತ್ತದೆ.