ನವರಾತ್ರಿ ಹಬ್ಬಕ್ಕೆ ಮನೆಯಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಸಿಹಿ ತಿಸಿಸು ಕಾಮನ್. ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ಉತ್ತರ ಭಾರತದಲ್ಲಿ ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತರ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಡುವ ಸಿಹಿ ತಿನಿಸು ಜಿಲೇಬಿ, ಅದರಲ್ಲೂ ನವರಾತ್ರಿ ಸಮಯದಲ್ಲಿ ತುಪ್ಪದ ಜಿಲೇಬಿಗೆ ಎಲ್ಲಿಲ್ಲದ ಬೇಡಿಕೆ.
ಜೇಬಿಗೆ ಇದು ತುಸು ಭಾರ ಅನಿಸಿದರೂ ಟೇಸ್ಟ್ ಮಾತ್ರ ಬೊಂಬಾಟಾಗಿರುತ್ತದೆ. ಹಾಗಾಗೀ ಶುಭ ಸಂದರ್ಭಗಳಲ್ಲಿ ತುಪ್ಪದ ಜಿಲೇಬಿ ಉತ್ತರ ಭಾರತದಲ್ಲಿ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ನಾವೂ ಜಿಲೇಬಿಗೂ ಮತ್ತು ತುಪ್ಪದ ಜಿಲೇಬಿಗೂ ಹೆಚ್ಚೆನೂ ವ್ಯತ್ಯಾಸ ಇಲ್ಲ.
Advertisement
Advertisement
ತುಪ್ಪದ ಜಿಲೇಬಿ ಮಾಡುವ ವಿಧಾನ
ಮೈದಾ ಹಿಟ್ಟಿಗೆ ನೀರನ್ನ ಬೆರೆಸಿಕೊಳ್ಳಬೇಕು. ಜಿಲೇಬಿ ಹಾಕಲು ಬರುವಂತೆ ಹದವಾಗಿ ನೀರು ಬೆರೆಸಿಕೊಂಡು ಹಿಟ್ಟು ತಯಾರಿಸಿಕೊಳ್ಳಬೇಕು. ಇದಕ್ಕೆ ನೀರು ಮತ್ತು ಮೈದಾ ಹೊರತುಪಡಿಸಿ ಬೇರೇನು ಬೆರೆಸಿಕೊಳ್ಳುವುದಿಲ್ಲ. ಹಿಟ್ಟು ತಯಾರಾದ ಬಳಿಕ ನಿಮ್ಮಿಷ್ಟದ ತುಪ್ಪವನ್ನು ಆಯ್ಕೆ ಮಾಡಿಕೊಂಡು ಕಡಾಯಿಗೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು.
Advertisement
ಕಾದ ತುಪ್ಪಕ್ಕೆ ತಯಾರಿಸಿಟ್ಟ ಹಿಟ್ಟಿನಿಂದ ಜಿಲೇಬಿ ಹಾಕಿಕೊಂಡು ಕೆಂಪಗೆ ರೋಸ್ಟ್ ಆಗುವರೆಗೂ ಕರಿದುಕೊಳ್ಳಬೇಕು. ಆದಾದ ಬಳಿಕ ಸಕ್ಕರೆ ಪಾಕಕ್ಕೆ ತುಪ್ಪದಲ್ಲಿ ಕರೆದ ಜಿಲೆಬಿ ಅದ್ದಿದ್ರೆ ಬಿಸಿ ಬಿಸಿ ತುಪ್ಪದ ಜಿಲೇಬಿ ಸವಿಯಬಹುದು. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?
Advertisement
ಸಾಮನ್ಯವಾಗಿ ಜಿಲೇಬಿಗೆ ಹಿಂದಿನ ದಿನಾ ರಾತ್ರಿಯೇ ಹಿಟ್ಟನ್ನು ಮಾಡಿಟ್ಟುಕೊಳ್ಳಬೇಕು, ಆದರೆ ತುಪ್ಪದ ಜಿಲೇಬಿಗೆ ಅದರ ಅವಶ್ಯಕತೆ ಇಲ್ಲ ಬಯಕೆ ಆದಾಕ್ಷಣ ಪಟಾಪಟ್ ಅಂತಾ ಆಗಲೇ ಹಿಟ್ಟು ತಯಾರಿಸಿ ಜಿಲೇಬಿ ಮಾಡಬಹುದು.
ದೆಹಲಿಯಲ್ಲಿ ಈ ಜಿಲೇಬಿ ತುಂಬಾ ಪ್ರಖ್ಯಾತಿ, ಸಾಮಾನ್ಯ ದಿನಗಳಲ್ಲೂ ತುಪ್ಪದ ಜಿಲೇಬಿ ಸವಿಬಹುದು. ಚಾಂದನಿ ಚೌಕ್ ನಲ್ಲಿ ತುಪ್ಪದ ಜಿಲೇಬಿ ಮಾರುವ ಅಂಗಡಿ ಒಂದೇ ಒಂದು ಇದ್ದು ದೂರದೂರಿನಿಂದ ಬಂದವರೆಲ್ಲ ಒಮ್ಮೆ ತುಪ್ಪದ ಜಿಲೇಬಿ ಸವಿಯಬಹುದು.