ಚಿಕನ್ ಕರಿಯನ್ನು ನಾವು ಬೇರೆ ಬೇರೆ ಸ್ಟೈಲ್ನಲ್ಲಿ ತಯಾರಿಸಿ ಸೇವಿಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಮಾಂಸದ ಅಡುಗೆ ಸಖತ್ ಸರಳವಾಗಿದೆ ಮತ್ತು ಅಷ್ಟೆ ರುಚಿಯಾಗಿಯು ಇರುತ್ತದೆ. ಖಾರವಾದ ಅಡುಗೆ ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ.
Advertisement
ಈ ಕರಿಯನ್ನು ಚಪಾತಿ, ಅನ್ನ ಹಾಗೂ ರಾಗಿ ಮುದ್ದೆಯೊಂದಿಗೂ ಸವಿಯಬಹುದು. ನೀವು ಮನೆಯಲ್ಲಿ ಸುಲಭ ಹಾಗೂ ಸರಳ ವಿಧಾನದಲ್ಲಿ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿಯೊಂದಿಗೆ ಮಾಡುವ ವಿಧಾನ ಈ ಕೆಳಗಿನಂತಿದೆ. ಇದನ್ನೂ ಓದಿ: ಬಿದಿರು ಕಳಲೆ ಸಾಂಬಾರ್ ಸೂಪರ್ ಟೇಸ್ಟ್
Advertisement
Advertisement
ಬೇಕಾಗುವ ಸಾಮಗ್ರಿಗಳು:
* ಕೋಳಿ ಮಾಂಸ – ಅರ್ಧ ಕೆಜಿ
* ಇರುಳ್ಳಿ_ 2
* ಶುಂಠಿ ಪೇಸ್ಟ್- 2 ಟೀ ಸ್ಪೂನ್
* ಕಾಳು ಮೆಣಸು – 2 ಟೀ ಸ್ಪೂನ್
* ಲವಂಗ, ಚಕ್ಕೆ- ಸ್ವಲ್ಪ
* ಗಸೆಗಸೆ- ಅರ್ಧ ಸ್ಪೂನ್
* ತೆಂಗಿನಕಾಯಿ- ಅರ್ಧ ಕಪ್
* ಪಲಾವ್ ಎಲೆ-1
* ಏಲಕ್ಕಿ- 2
* ಜೀರಿಗೆ- 1 ಟೀ ಸ್ಪೂನ್
* ಕೊತ್ತಂಬರಿ ಬೀಜ- 3 ಟೀ ಸ್ಪೂನ್
* ಅಡುಗೆ ಎಣ್ಣೆ- ಅರ್ಧ ಕಪ್
Advertisement
ಮಾಡುವ ವಿಧಾನ:
* ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಬಳಸದೆ ಕಾಳು ಮೆಣಸು, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿದುಕೊಳ್ಳಬೇಕು.- ಸಂಪೂರ್ಣವಾಗಿ ಆರಿದ ಬಳಿಕ ಮಿಕ್ಸರ್ ಪಾತ್ರೆಗೆ ಸೇರಿಸಿ ರುಬ್ಬಿಕೊಳ್ಳಬೇಕು.
* ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
* ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಈರುಳ್ಳಿ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಉಪ್ಪನ್ನು ಸೇರಿಸಿ, 15 ನಿಮಿಷಗಳ ಕಾಲ ಬೇಯಿಸಬೇಕು.
* ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆ, ಈರುಳ್ಳಿ, ತೆಂಗಿನ ತುರಿ, ಜೀರಿಗೆ ಉಳಿದ ಮಸಾಲೆ ಸಾಮಾಗ್ರಿಯನ್ನು ಸೇರಿಸಿ ಸ್ವಲ್ಪ ಬೇಯುವವರೆಗೆ ಹುರಿಯಬೇಕು.
* ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆಯೇ 2 ನಿಮಿಷಗಳ ಕಾಲ ಹಿರಿಯಿರಿ. ನಂತರ ದಾಲ್ಚಿನ್ನಿ ಮತ್ತು ಲವಂಗದೊಂದಿಗೆ ಮಿಕ್ಸರ್ ಪಾತ್ರೆಗೆ ಸೇರಿಸಿ, ಪುಡಿ ಮಾಡಬೇಕು.
* ನಂತರ ಕೋಳಿ ಮಾಂಸ ಇರುವ ಪಾತ್ರೆಗೆ ಈ ಮೊದಲೆ ತಯಾರಿಸಿದ ರುಬ್ಬಿದ ಮಸಾಲೆ, ಮತ್ತು ಹುರಿದಿಟ್ಟ ಇರುಳ್ಳಿ, ಅರಿಶಿಣ, ಏಲಕ್ಕಿ, ಕೆಂಪುಮೆಣಸು ಕೊತ್ತಂಬರಿ ಸೇರಿಸಿ ಚೆನ್ನಾಗಿ ಬೇಯಿಸಿದರೆ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.