ಮಾಡುವ ಅಡುಗೆ ರುಚಿಯಾಗಿ ಮತ್ತು ಆರೋಗ್ಯವಾಗಿಯೂ ಇರಬೇಕು ಎಂದು ನಾವು ಬಯಸುತ್ತೇವೆ. ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ನಾವು ಇಂದು ಹೇಳಲು ಹೊರಟಿರುವ ಅಡುಗೆ ಮಲೆನಾಡ ಭಾಗಗಗಲ್ಲಿ ಹೆಚ್ಚಾಗಿ ಮಾಡುತ್ತಾರೆ. ಬಿದಿರು ಕಳಲೆ ಸಾಂಬಾರ್ ಅನ್ನು ಒಬ್ಬೊಬ್ಬರು ಒಂದು ವಿಧವಾಗಿ ಮಾಡುತ್ತಾರೆ. ಇಂದು ಹೇಳಲು ಹೊರಟಿರುವ ರೆಸಿಪಿಗೆ ಬಿದರು ಕಳಲೆ ಜೊತೆಗೆ ಸೊಪ್ಪು, ಕಾಳು ತರಕಾರಿಗಳನ್ನು ಹೆಚ್ಚಾಗಿ ಬಳಸಿ ಮಾಡುತ್ತೀರುವುದರಿಂದ ಸಖತ್ ಟೇಸ್ಟ್ ಕೊಡುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಸಾಸಿವೆ- ಅರ್ಧ ಸ್ಪೂನ್
* ಕರಿಬೇವು – ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್
* ಬಿದಿರು ಕಳಲೆ – 2 ಕಪ್
* ಟೊಮೆಟೋ- 2
* ಬದನೆಕಾಯಿ, ಕೋಸು, ಹುರುಳಿ ಕಾಯಿ, ನುಗ್ಗೆಕಾಯಿ, ಮೂಲಂಗಿ, ಆಲೂಗಡ್ಡೆ, ಕ್ಯಾರೆಟ್- 1 ಕಪ್
* ಹರವೆ ಸೊಪ್ಪು, ಮೆಂತೆ ಸೊಪ್ಪು, ಸಬ್ಬಸಿಗೆ ಸೊಪ್ಪು, ನುಗ್ಗೆ ಸೊಪ್ಪು – ಅರ್ಧ ಕಪ್
* ಬಟಾಣಿ, ಹೆಸರು ಕಾಳು, ಅವರೆ ಕಾಳು, ಅಲಸಂಡೆ ಕಾಳು, ಹುರುಳಿ ಕಾಳು- ಅರ್ಧ ಕಪ್
* ಬೆಳ್ಳುಳ್ಳಿ-1
* ಬ್ಯಾಡಗಿ ಮೆಣಸಿನಕಾಯಿ-3
* ಕಾಯಿ ತುರಿ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ ಇದನ್ನೂ ಓದಿ: ರುಚಿಕರವಾದ ಆಲೂ ಕ್ಯಾಪ್ಸಿಕಂ ಕರ್ರಿ ಮಾಡಲು ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಹುರಿದ ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
Advertisement
* ಬಳಿಕ ಒಂದು ಕುಕ್ಕರ್‍ಗೆ ಬಿದಿರು ಕಳಲೆ, ಬದನೆಕಾಯಿ, ಕೋಸು, ಹುರುಳಿ ಕಾಯಿ, ಈರುಳ್ಳಿ, ಟೊಮೆಟೋ, ನುಗ್ಗೆಕಾಯಿ, ಮೂಲಂಗಿ, ಆಲೂಗಡ್ಡೆ, ಸೀಮೆ ಬದನೆಕಾಯಿ, ಕ್ಯಾರೆಟ್, ಹರವೆ ಸೊಪ್ಪು, ಮೆಂತೆ ಸೊಪ್ಪು, ಸಬ್ಬಸಿಗೆ ಸೊಪ್ಪು, ನುಗ್ಗೆ ಸೊಪ್ಪು, ಬಟಾಣಿ, ಹೆಸರು ಕಾಳು, ಅವರೆ ಕಾಳು, ಅಲಸಂಡೆ ಕಾಳು, ಹುರುಳಿ ಕಾಳು, ಉಪ್ಪು ಹಾಕಿ ಬೇಯಿಸಿ.
* ಬಳಿಕ ಬೇಯಿಸಿದ ತರಕಾರಿಯನ್ನು ಒಂದು ಪಾತ್ರೆಗೆ ಹಾಕಿ, ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕುದಿಸ ಬೇಕು.
* ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿದರೆ ಬಿದಿರು ಕಳಲೆ ಸಾಂಬಾರ್ ಸವಿಯಲು ಸಿದ್ಧವಾಗುತ್ತದೆ.