ಹಬ್ಬ ಎಂದರೆ ಸಿಹಿ ಅಡುಗೆ ಹೆಚ್ಚಾಗಿರುತ್ತದೆ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ವಿಘ್ನ ವಿನಾಶಕನಾಗಿರುವ ಗಣಪನ ಪೂಜೆಗೆ ಸಿಹಿ ತಿಂಡಿಗಳನ್ನು ಮಾಡುತ್ತೀರಾ. ಸರಳವಾಗಿ ಹೊಸ ಹೊಸ ರೆಸಿಪಿಗಳನ್ನು ನೀವೆನಾದ್ರೂ ತಯಾರಿಸಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡಬೇಕು ಎಂದರೆ ಬಾದಾಮಿ ಹಲ್ವಾ ರೆಸಿಪಿಯನ್ನು ಮಾಡಲು ಟ್ರೈ ಮಾಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಬಾದಾಮಿ – 1 ಕಪ್ (ರಾತ್ರಿ ನೆನೆಸಿಟ್ಟಿರಬೇಕು)
* ಸಕ್ಕರೆ – 1 ಕಪ್
* ಹಾಲು – 1 ಕಪ್
* ತುಪ್ಪ – ಅರ್ಧ ಕಪ್
* ಕೇಸರಿ – ಕೆಲವು ಎಸಳು (ಹಾಲಿನಲ್ಲಿ ನೆನೆಹಾಕಿರಬೇಕು) ಇದನ್ನೂ ಓದಿ: ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ
Advertisement
Advertisement
ಮಾಡುವ ವಿಧಾನ:
Advertisement
* ನೆನೆಸಿಟ್ಟಿರುವ ಬಾದಾಮಿಗೆ ಹಾಲನ್ನು ಹಾಕಿ ರುಬ್ಬಿಕ್ಕೊಳ್ಳಬೇಕು.
* ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆ ಸಕ್ಕರೆಯನ್ನು ಹಾಕಿ ಸಕ್ಕರೆ ಕರಗುವವರೆಗೆ ಇದನ್ನು ಮಿಶ್ರಣ ಮಾಡಿಕೊಳ್ಳಬೇಕು.
* ಇದೀಗ ಬಾದಾಮಿ ಪೇಸ್ಟ್ ಅನ್ನು ಸೇರಿಸಿಕೊಂಡು ಸೌಟ್‍ನಿಂದ ಚೆನ್ನಾಗಿ ತಿರುಗಿಸುತ್ತಾ, ಕೇಸರಿ ಮತ್ತು ಬೇಕಾದಲ್ಲಿ ಇನ್ನಷ್ಟು ತುಪ್ಪವನ್ನು ಸೇರಿಸಿಕೊಂಡು ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ಹಲ್ವಾ ದಪ್ಪ ಹದಕ್ಕೆ ಬರುವವರೆಗೆ ಬೇಯಿಸಬೇಕು. ಆಗ ರುಚಿತಯಾದ ಬಾದಾಮಿ ಹಲ್ವಾ ಸವಿಯಲು ಸಿದ್ಧವಾಗುತ್ತದೆ.