ನಾವು ಸೇವಿಸುವ ಆಹಾರ ರುಚಿಯಾಗಿರಲಿ ಮತ್ತು ಆರೋಗ್ಯವಾಗಿರಬೇಕು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತೇವೆ. ನಾವು ಇಂದು ತಿಳಿಸುತ್ತಿರುವ ತರಕಾರಿ ಸಾಗು ಸಖತ್ ರುಚಿಯಾಗಿದೆ ಮತ್ತು ತರಕಾರಿಗಳನ್ನು ಬಳಸುತ್ತಿರುವುದರಿಂದ ಆರೋಗ್ಯಕ್ಕೆ ಬೇಕಾಗಿರುವ ಪ್ರೋಟಿನ್ ಕೂಡಾ ಸಿಗುತ್ತದೆ. ನೀವು ಸರಳವಾಗಿ ಮತ್ತು ದಿಡೀರ್ ಆಗಿ ಆಹಾರ ತಯಾರಿಸಬೇಕು ಎಂದು ಯೋಚಿಸುತ್ತಿದ್ದರ ಎಂದಾದರೆ ಇಂದು ಈ ಅಡುಗೆಯನ್ನು ಮಾಡಲು ಒಮ್ಮೆ ಟ್ರೈ ಮಾಡಿ.
Advertisement
ಬೇಕಾಗುವ ಸಾಮಗ್ರಿಗಳು:
ಬೀನ್ಸ್, ಕ್ಯಾರೆಟ್, ಬಟಾಣಿ, ಹೂಕೋಸು, ಆಲೂಗಡ್ಡೆ – 1ಕಪ್
ಉಪ್ಪು-ರುಚಿಗೆ ತಕ್ಕಷ್ಟು
ಈರುಳ್ಳಿ- 1
ಟೊಮೆಟೋ- 2
ಗೋಡಂಬಿ-ಸ್ವಲ್ಪ
ಬೆಳ್ಳುಳ್ಳಿ- ಸ್ವಲ್ಪ
ಹಸಿಮೆಣಸಿನ ಕಾಯಿ-6-6
ಹುರಿಗಡಲೆ- 4 ಚಮಚ
ದನಿಯಾ ಪುಡಿ- 1 ಚಮಚ
ಶುಂಠಿ-ಸ್ವಲ್ಪ
ಗಸಗಸೆ-ಸ್ವಲ್ಪ
ಪುದೀನಾ-ಸ್ವಲ್ಪ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಚಕ್ಕ,ಲವಂಗ, ಏಲಕ್ಕಿ, ಪಲಾವ್ ಎಲೆ
ಅಡುಗೆ ಎಣ್ಣೆ- 1ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪಾತ್ರೆಯೊಂದಕ್ಕೆ ಸ್ವಲ್ಪ ನೀರು, ಉಪ್ಪು ಹಾಗೂ ತರಕಾರಿಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ಮಿಕ್ಸರ್ ಜಾರ್ ನಲ್ಲಿ ಈರುಳ್ಳಿ, ಟೊಮೆಟೋ, ಗೋಡಂಬಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಹುರಿಗಡಲೆ, ದನಿಯಾ ಅಥವಾ ದನಿಯಾ ಪುಡಿ, ಶುಂಠಿ, ಗಸಗಸೆ, ಪುದೀನಾ, ಕೊತ್ತಂಬರಿ ಸೊಪ್ಪು, ಚಕ್ಕ,ಲವಂಗ, ಏಲಕ್ಕಿ, ಪಲಾವ್ ಎಲೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
Advertisement
* ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಉಳಿದ ಈರುಳ್ಳಿ ಹಾಗೂ ಟೊಮೆಟೋವನ್ನು ಸಣ್ಣಗೆ ಕತ್ತರಿಸಿಕೊಂಡು ಬಿಸಿಯಾದ ಎಣ್ಣೆಗೆ ಹಾಕಿ ಹುರಿದುಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ರುಬ್ಬಿಕೊಂಡ ಮಸಾಲೆಯನ್ನು ಕುದಿಸಿಕೊಳ್ಳಬೇಕು.
* ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಈಗಾಗಲೇ ಬೇಯಿಸಿಕೊಂಡ ತರಕಾರಿಗಳನ್ನು ಹಾಕಿ ಕುದಿಸಿದರೆ ರುಚಿಕರವಾದ ತರಕಾರಿ ಸಾಗು ಸವಿಯಲು ಸಿದ್ಧವಾಗುತ್ತದೆ.