ಬೆಳಗ್ಗಿನ ಉಪಹಾರಕ್ಕೆ ಬಿಸಿ ಬಿಸಿಯಾದ ದೋಸೆ ಇದ್ದರೆ ಚೆನ್ನಾಗಿರುತ್ತದೆ. ರುಚಿಯಾದ ಆಹಾರ ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಅಡುಗೆ ಮಾಡಲು ಸುಲಭವಾಗಿರುವ ರೆಸಿಪಿಗಳನ್ನು ನಾವು ಹುಡುಕುತ್ತಿರುತ್ತೇವೆ. ನಿಮ್ಮ ರುಚಿಗೆಟ್ಟ ನಾಲಿಗೆಗೆ ಹೊಸ ನಳಪಾಕವನ್ನು ತಿನ್ನಲು ಬಯಸುತ್ತದೆ. ಸರಳ ವಿಧಾನದಲ್ಲಿರುವ ತೊಗರಿ ಬೇಳೆ ದೋಸೆಯನ್ನು ತಯಾರಿಸುವ ವಿಧಾನ ನಿಮಗಾಗಿ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ- 1ಕಪ್
* ತೊಗರಿ ಬೇಳೆ- 1ಕಪ್
* ಉದ್ದಿನಬೇಳೆ- ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಕ್ಯಾರೆಟ್- ಅರ್ಧ ಕಪ್
* ಹಸಿಮೆಣಸು- 3
* ಶುಂಠಿ- ಸ್ವಲ್ಪ
* ಕರಿಬೇವು- ಸ್ವಲ್ಪ
* ಈರುಳ್ಳಿ- 1
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ತೊಗರಿ ಬೇಳೆ, ಅಕ್ಕಿಯನ್ನು ಚೆನ್ನಾಗಿ ತೊಳೆದು 4ಗಂಟೆಗಲ ಕಾಲ ನೀರಿನಲ್ಲಿ ನೆನೆಸಿಟ್ಟಿರಬೇಕು.
* ನಂತರ ಈಗಾಗಲೇ ನೆನೆಸಿಟ್ಟಿರುವ ಅಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತೆಗೆ ಹಾಕಿಕೊಂಡು ತುರಿದ ಕ್ಯಾರೆಟ್, ಹಸಿಮೆಣಸು, ಶುಂಠಿ, ಕರಿಬೇವು, ಉಪ್ಪು, ಈರುಳ್ಳಿಯನ್ನೆಲ್ಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ನಂತರ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದು ಬಿಸಿಯಾದ ನಂತರ ಎಣ್ಣೆ ಹಾಕಿ ನಂತರ ದೋಸೆ ಹಿಟ್ಟು ಹಾಕಿ ದೋಸೆ ಮಾಡಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ತೊಗರಿ ಬೇಳೆ ದೋಸೆ ಸವಿಯಲು ಸಿದ್ಧವಾಗುತ್ತದೆ.