ಬೆಳಗ್ಗೆ, ಸಂಜೆ ಹೊತ್ತಿನಲ್ಲಿ ಸವಿಯಬಹುದಾದ ರೆಸಿಪಿ ಹುಡುಕುತ್ತಿದ್ದೀರಾ? ತಿನ್ನಲು ರುಚಿಕರವಾಗಿರುವ ಮತ್ತು ಮಕ್ಕಳಿಗೆ ತುಂಬಾನೇ ಇಷ್ಟವಾಗುವ ಅಡುಗೆ ಎಂದರೆ ಟೊಮೆಟೋ ಬಾತ್. ಈ ಅಡುಗೆಯನ್ನು ಮಾಡುವುದು ತುಂಬಾ ಸುಲಭ ಮತ್ತು ನಾಲಿಗೆಗೆ ರುಚಿ ನೀಡುವ ಅಡುಗೆಯಾಗಿದೆ. ರುಚಿ ರುಚಿಯಾದ ಟೊಮೆಟೋ ಬಾತ್ ಮಾಡೋದು ಹೇಗೆ ಎಂಬುದು ಇಲ್ಲಿದೆ
ಬೇಕಾಗುವ ಸಾಮಗ್ರಿಗಳು:
* ಬೇಕಾಗುವ ಸಾಮಾಗ್ರಿಗಳು :
* ತುಪ್ಪ- ಅರ್ಧ ಕಪ್
* ಪುಲಾವ್ ಎಲೆ- 2
* ಚಕ್ಕೆ – 2
* ಲವಂಗ – 4
* ಏಲಕ್ಕಿ – 2
* ಶುಂಠಿ -ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
* ನೆನೆಸಿದ ಒಣ ಬಟಾಣಿ -ಅರ್ಧ ಕಪ್
* ಗೋಡಂಬಿ – ಸ್ವಲ್ಪ
* ಹಸಿ ಮೆಣಸಿನ ಕಾಯಿ – 2
* ಟೊಮೆಟೋ – 2
* ಅರಿಶಿನ ಪುಡಿ – ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಚ್ಚ ಖಾರದ ಪುಡಿ – ಅರ್ಧ ಚಮಚ
* ಪುದಿನ ಎಲೆ – 5 ಎಲೆಗಳು
* ಕೊತ್ತಂಬರಿ ಸೊಪ್ಪು – 3 ದೊಡ್ಡ ಚಮಚ
* ಅಕ್ಕಿ – 2 ಕಪ್ ಇದನ್ನೂ ಓದಿ: ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ
Advertisement
ಮಾಡುವ ವಿಧಾನ:
* ಒಂದು ಕಪ್ ಅಕ್ಕಿಯನ್ನು ಕೆಲ ನಿಮಿಷಗಳ ಕಾಲ ತೊಳೆದು ನೀರಿನಲ್ಲಿ ನೆನೆಸಿಡಿ.
* ನಂತರ ಪ್ರೆಶರ್ ಕುಕ್ಕರ್ನಲ್ಲಿ 2 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ ಅದಕ್ಕೆ 2 ಪಲಾವ್ ಎಲೆ, ಚಕ್ಕೆ, ಏಲಕ್ಕಿ ಮತ್ತು 2 ಲವಂಗ ಸೇರಿಸಿ ಹುರಿದುಕೊಳ್ಳಿ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
Advertisement
* ನಂತರ ಹಸಿ ಬಟಾಣಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಚನ್ನಾಗಿ ಹುರಿಯಬೇಕು.
* ಈಗ 2 ಚಮಚ ಗೋಡಂಬಿ ಬೀಜ, ಹಸಿ ಮೆಣಸಿನ ಕಾಯಿ, ಟೊಮೆಟೋ ಸೇರಿಸಿ ಮಧ್ಯಮ ಉರಿಯಲ್ಲಿ ಚನ್ನಾಗಿ ಹುರಿಯಿರಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ಈಗ ಮೆಣಸಿನ ಪುಡಿ, ಉಪ್ಪು, 5 ಕತ್ತರಿಸಿದ ಪುದಿನ ಎಲೆಗಳು, 3 ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂ ತರ 2 ಕಪ್ ನೀರನ್ನು ಹಾಕಿ ಚನ್ನಾಗಿ ಕುದಿಸಿ, ನೀರು ಕುದಿಯಲು ಪ್ರಾರಂಭಿಸಿದ ನಂತರ ಅದಕ್ಕೆ ನೆನೆಸಿದ ಅಕ್ಕಿಯನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ಒಂದೆರಡು ವಿಷಲ್ ಬರುವವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿದರೆ ರುಚಿಯಾ ಟೊಮೆಟೋ ಬಾತ್ ಸವಿಯಲು ಸಿದ್ಧವಾಗುತ್ತದೆ.