ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ, ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಖಾರವಾದ ಮಟನ್ ಕರಿಯನ್ನು ತಯಾರಿಸಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ಕುರಿ ಮಾಂಸ- 1 ಕೆಜಿ
* ಟೊಮೆಟೋ- 2
* ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
* ಈರುಳ್ಳಿ- 2
* ಗರಂಮಸಾಲೆ- 1ಚಮಚ
* ದನಿಯಾ ಪುಡಿ- 2 ಚಮಚ
* ಜೀರಿಗೆ ಪುಡಿ- 2 ಚಮಚ
* ಅರಿಸಿಣ- ಸ್ವಲ್ಪ
* ಖಾರದಪುಡಿ – 5 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ತೆಂಗಿನ ಎಣ್ಣೆ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
Advertisement
ಮಾಡುವ ವಿಧಾನ:
Advertisement
* ಕುಕ್ಕರ್ಗೆ ಮಟ್ಟನ್, ತೆಂಗಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮೂರರಿಂದ ನಾಲ್ಕು ವಿಶಿಲ್ ಕೂಗಿಸಿ ಬೇಯಿಸಿಕೊಳ್ಳಿ.
* ಮಿಕಿ ಜಾರಿಗೆ ಈರುಳ್ಳಿ, ಟೊಮೆಟೋ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
Advertisement
* ನಂತರ ಒಂದು ಬಾಣೆಲೆಗೆ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ರುಬ್ಬಿಕೊಂಡ ಈರುಳ್ಳಿ ಪೇಸ್ಟ್, ಗರಂಮಸಾಲೆ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಶಿಣ ಪುಡಿ, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ
Advertisement
* ನಂತರ ಈ ಪಾತ್ರೆಗೆ ಈಗಾಗಲೇ ಬೀಯಿಸಿದ ಕುರಿ ಮಾಂಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಮಡನ್ ಕರಿ ಸವಿಯಲು ಸಿದ್ಧವಾಗುತ್ತದೆ.