ದೋಸೆ ಎಲ್ಲರಿಗೂ ಇಷ್ಟ. ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ಇದರ ಪಟ್ಟಿ ಬೆಳೆಯುತ್ತದೆ. ಈ ದೋಸೆ ತಿಂದು ನಿಮಗೆ ಬೇಸರವಾಗಿದ್ಯಾ? ಹಾಗಿದ್ರೆ ಇವತ್ತು ನಾವು ಆಲೂಗಡ್ಡೆ ದೋಸೆ ಮಾಡಲು ಟ್ರೈ ಮಾಡೋಣ
Advertisement
ಬೇಕಾಗುವ ಸಾಮಗ್ರಿಗಳು:
* ಆಲೂಗಡ್ಡೆ- 3
* ಅಕ್ಕಿ ಹಿಟ್ಟು- 1ಕಪ್
* ರವಾ – ಅರ್ಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಈರುಳ್ಳಿ – 1
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಮೆಣಸಿನಕಾಯಿ- 2
* ಕರಿಬೇವು- ಸ್ವಲ್ಪ
* ಜೀರಿಗೆ- 1ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
Advertisement
ಮಾಡುವ ವಿಧಾನ:
* ಮಿಕ್ಸಿ ಜಾರ್‌ನಲ್ಲಿ 3 ಬೇಯಿಸಿದ ಆಲೂವನ್ನು ಹಾಕಿ ರುಬ್ಬಿಕೊಳ್ಳಿ.
Advertisement
* ಒಂದು ಬೌಲ್‍ಗೆ ಆಲೂ ಪೇಸ್ಟ್, ಅಕ್ಕಿ ಹಿಟ್ಟು, ರವಾ ಉಪ್ಪು ಸೇರಿಸಿ ಉಂಡೆಗಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ಅದೇ ಮಿಶ್ರಣಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಕರಿಬೇವು, ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ನಂತರ ದೋಸೆ ಕಾವಲಿ ಬಿಸಿ ಮಾಡಿ ಅಡುಗೆ ಎಣ್ಣೆಯನ್ನು ಹಾಕಿ ಮಿಶ್ರಣದಿಂದ ದೋಸೆ ಹಾಕಿದರೆ ರುಚಿಯದಾ ಆಲೂಗಡ್ಡೆ ದೋಸೆ ಸವಿಯಲು ಸಿದ್ಧವಾಗುತ್ತದೆ.