ಪ್ರತಿದಿನ ಬೆಳಗ್ಗೆ ಎದ್ದು ಏನಪ್ಪಾ, ತಿಂಡಿ ಮಾಡುವುದು ಯಾವ ತಿಂಡಿ ಮಾಡಿದರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತದೆ ಎಂದು ಯೋಚನೆ ಮಾಡ್ತಿದ್ರೆ, ನೀವು ಸೋಯಾಬೀನ್ ಇಡ್ಲಿ ಮಾಡಬಹುದು. ಇದನ್ನ ಮಾಡುವುದು ಕಷ್ಟಕರವಲ್ಲ, ಬಹಳ ಸುಲಭವಾಗಿದೆ, ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
* ಸೋಯಾಬೀನ್- 1 ಕಪ್
* ಬಿಳಿ ಉದ್ದಿನ ಬೇಳೆ 1 ಕಪ್
* ಮೆಂತ್ಯ – ಸ್ವಲ್ಪ
* ಇಡ್ಲಿ ರೈಸ್ 2 ಕಪ್
* ಚನ್ನಾ ದಾಲ್- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ:
* ಮೊದಲನೆಯದಾಗಿ, ಬೇಳೆ, ಅಕ್ಕಿ ಮತ್ತು ಸೋಯಾಬೀನ್ ನೆನೆಸಿಟ್ಟುಕೊಳ್ಳಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
* ನೆನೆಸಿದ ನಂತರ, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ದಪ್ಪ ಮತ್ತು ಸ್ಥಿರವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿದರೆ ಸಾಕು. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
Advertisement
* ಈಗ ಅದಕ್ಕೆ ಉಪ್ಪನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಕನಿಷ್ಠ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಇಟ್ಟಿರಬೇಕು. ಇದನ್ನೂ ಓದಿ: ಕ್ರಿಸ್‍ಮಸ್ ಆಚರಣೆಗೆ ಮನೆಯಲ್ಲಿಯೇ ಮಾಡಿ ಸಿಹಿಯಾದ ಕೇಕ್
* ಬೆಳಗ್ಗೆ ಅದನ್ನು ಮತ್ತೊಮ್ಮೆ ಮಿಶ್ರಣ ಮಾಡಿ ಇಡ್ಲಿ ಸ್ಟೀಮರ್‌ನಲ್ಲಿ ಹಾಕಿ ಸ್ಟೀಮ್ ಮಾಡಿದರೆ ರುಚಿಯಾದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್