ಬೆಳಗ್ಗಿನ ತಿಂಡಿಗೆ ಹೆಚ್ಚಿನವರ ಮನೆಯಲ್ಲಿ ಉಪ್ಪಿಟ್ಟು ಮಾಡಲಾಗುತ್ತದೆ. ಉಪ್ಪಿಟ್ಟಿನಲ್ಲಿ ಸಹ ವೆರೈಟಿ ಇದೆ. ಸಬ್ಬಕ್ಕಿ ಉಪ್ಪಿಟ್ಟು, ಓಟ್ಸ್ ಒಪ್ಪಿಟ್ಟು ಮಾಡಲಾಗುತ್ತದೆ. ಆದರೆ ಇಂದು ನಾವು ಹುಳಿ, ಖಾರ ರುಚಿಯಾಗಿರುವ ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಈ ಉಪ್ಪಿಟ್ಟು ಅಂದ್ರೆ ಮಕ್ಕಳಿಗೂ ಇಷ್ಟ. ಅಲ್ಲದೇ ಶಾವಿಗೆ ಉದ್ದವಿರುವುದರಿಂದ ಇದನ್ನು ಮ್ಯಾಗಿ ಅಂದುಕೊಂಡು ಇಷ್ಟಪಟ್ಟು ತಿನ್ನುತ್ತಾರೆ.
Advertisement
ಬೇಕಾಗುವ ಸಾಮಗ್ರಿಗಳು:
* ಶಾವಿಗೆ- 2ಕಪ್
* ಉದ್ದಿನ ಬೇಳೆ- 2 ಚಮಚ
* ಈರುಳ್ಳಿ- 1
* ಟೊಮ್ಯಾಟೋ-1
* ಹಸಿ ಮೆಣಸಿನಕಾಯಿ- 3
* ಕರಿಬೇವು- ಸ್ವಲ್ಪ
* ಶುಂಠಿ- ಸ್ವಲ್ಪ
* ಅರಿಶಿನ ಪುಡಿ- ಅರ್ಧ ಚಮಚ
* ಅಡುಗೆ ಎಣ್ಣೆ- 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ- ಸ್ವಲ್ಪ
* ತೆಂಗಿನ ತುರಿ- ಅರ್ಧ ಕಪ್
* ಸಾಸಿವೆ- 1 ಚಮಚ
Advertisement
Advertisement
ಮಾಡುವ ವಿಧಾನ:
* ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಶಾವಿಗೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿದಿಟ್ಟುಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ನಂತರ ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ, ಉಪ್ಪು, ಅರಿಶಿಣವನ್ನು ಹಾಕಿ ಬೇಯಿಸಿರಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
* ನಂತರ ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ ಹುರಿದಿಟ್ಟ ಶಾವಿಗೆ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ ಸ್ವಲ್ಪ ಸಮಯ ಬೇಯಿಸಿದರೆ ರುಚಿಯಾದ ಶಾವಿಗೆ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ