ಪೇಡ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಈ ತಿನಿಸನ್ನು ಸುಲಭವಾಗಿ ಬಹುಬೇಗ ಮಾಡಬಹುದು. ಯಾವುದೇ ಹಬ್ಬ-ಹರಿದಿನ ಅಥವಾ ಅತಿಥಿಗಳು ಮನೆಗೆ ಭೇಟಿಕೊಟ್ಟಾಗ ಸಿದ್ಧಪಡಿಸಬಹುದು. ಪೇಡದಲ್ಲಿ ಅನೇಕ ವಿಧಗಳಿವೆ. ಸರಳವಾಗಿ ಅಕ್ಕಿ ಹಿಟ್ಟಿನಿಂದ ಪೇಡ ಹೇಗೆ ತಯಾರು ಮಾಡುವುದು ಎನ್ನುವ ವಿಧಾನ ಈ ಕೆಳಗಿನಂತಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ ಹಿಟ್ಟು- 1 ಕಪ್
* ಬೆಲ್ಲ- 1 ಕಪ್
* ತೆಂಗಿನ ಹಾಲು- 1 ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ತುಪ್ಪ- ಅರ್ಧ ಕಪ್
Advertisement
ಮಾಡುವ ವಿಧಾನ:
* ಮೊದಲು ಬಾಣಲೆಯಲ್ಲಿ ಅಕ್ಕಿ ಹಿಟ್ಟನ್ನು ಕಡಿಮೆ ಉರಿಯಲ್ಲಿ ಹುರಿದಿಟ್ಟುಕೊಳ್ಳಬೇಕು. ಇದನ್ನೂ ಓದಿ: ಬೆಂಡೆಕಾಯಿ ಪಲ್ಯವನ್ನು ಹೀಗೆ ಮಾಡಿದ್ರೆ ಸಖತ್ ಟೇಸ್ಟ್
Advertisement
* ನಂತರ ಮತ್ತೊಂದು ಪಾತ್ರೆಯಲ್ಲಿ ಬೆಲ್ಲ, ನೀರು ಹಾಕಿ. ಬೆಲ್ಲವನ್ನು ಚೆನ್ನಾಗಿ ಕರಗಿಸಿ. ಇದನ್ನೂ ಓದಿ: ಹೋಟೆಲ್ ಸ್ಟೈಲ್‌ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ
Advertisement
* ತೆಂಗಿನ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಕುದಿಯಲು ಬಿಡಬೇಕು.
* ಮಿಶ್ರಣಕ್ಕೆ ಹುರಿದ ಅಕ್ಕಿ ಹಿಟ್ಟು, ಏಲಕ್ಕಿ ಪುಡಿ, ತುಪ್ಪ ಸೇರಿಸಿ, ಮಿಶ್ರಣವು ದಪ್ಪವಾಗುವವರೆಗೆ, ಉಂಡೆಗಟ್ಟದಂತೆ ಮಿಕ್ಸ್ ಮಾಡಿ. ಇದನ್ನೂ ಓದಿ: ವಿಭಿನ್ನ ಟೇಸ್ಟ್‌ನ ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ
* ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ನಿಮಗೆ ಬೇಕಾದ ರೀತಿಯಲ್ಲಿ ಕಟ್ ಮಾಡಿಟ್ಟುಕೊಂಡರೆ ರುಚಿಯಾದ ಅಕ್ಕಿ ಪೇಡ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ