ಸೆಟ್ ದೋಸೆ, ನೀರ್ ದೋಸೆ, ರಾಗಿ ದೋಸೆ ಮತ್ತು ಗೋದಿ ದೋಸೆಯನ್ನು ನೀವು ಸವಿದಿರುತ್ತಿರ. ಆದರೆ ನಾವು ಇಂದು ತೆಳುವಾದ ಮತ್ತು ಗರಿಗರಿಯಾದ ರವಾ ದೋಸೆ ಮಾಡುವ ಸರಳ ವಿಧಾನವನ್ನು ನಿಮಗೆ ಹೇಳುತ್ತಿದ್ದೇವೆ.
Advertisement
ಬೇಕಾಗುವ ಸಾಮಗ್ರಿಗಳು:
* ಬಾಂಬೆ ರವಾ- 2ಕಪ್
* ಅಕ್ಕಿ ಹಿಟ್ಟು- ಅರ್ಧ ಕಪ್
* ಮೈದಾ – ಅರ್ಧ ಕಪ್
* ಶುಂಠಿ- ಸ್ವಲ್ಪ
* ಹಸಿ ಮೆಣಸಿನಕಾಯಿ- 2
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಕರಿಬೇವು- ಸ್ವಲ್ಪ
* ಜೀರಿಗೆ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕಾಳು ಮೆಣಸು- ಸ್ವಲ್ಪ
* ಈರುಳ್ಳಿ- 1
* ಅಡುಗೆ ಎಣ್ಣೆ- ಅರ್ಧ ಕಪ್
Advertisement
ಮಾಡುವ ವಿಧಾನ:
* ಒಂದು ಬೌಲ್‍ಗೆ ರವಾ, ಅಕ್ಕಿ ಹಿಟ್ಟು, ಮೈದಾ ಕತ್ತರಿಸಿದ ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಕಾಳುಮೆಣಸು, ಮತ್ತು ಕರಿಬೇವಿನ ಎಲೆ, ಜೀರಿಗೆ ಮತ್ತು ಉಪ್ಪನ್ನು ಸಹ ಸೇರಿಸಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
* ಸ್ವಲ್ಪ ನೀರು ಹಾಕಿ, ನೀರ್ ದೋಸೆ ಹದಕ್ಕೆ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಬೇಕು.
Advertisement
*ನಂತರ ದೋಸೆ ತವಾಗೆ ಅಡುಗೆ ಎಣ್ಣೆಯನ್ನು ಸವರಿ ಬಿಸಿ ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
* ನಂತರ ಹಿಟ್ಟಿನ ಮಿಶ್ರಣದಿಂದ ನೀರ್ ದೋಸೆ ಹಾಕುವ ರೀತಿಯಲ್ಲಿ ತವಾ ಮೇಲೆ ದೋಸೆ ಹಾಕಿ ಬೇಯಿಸಿದರೆ ರುಚಿಯಾದ ರವಾ ದೋಸೆ ಸವಿಯಲು ಸಿದ್ಧವಾಗುತ್ತದೆ.