FoodLatestMain PostVeg

ಫಟಾಫಟ್ ಅಂತಾ ಮಾಡಬಹುದು ಪಾಸ್ತಾ

ರಳವಾಗಿ ಮಾಡುವ ಅಡುಗೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪಾಸ್ತಾದಿಂದ ಹೊಸ ರುಚಿಯ ಅಡುಗೆಯನ್ನು ಮಾಡಿ. ಮನೆಮಂದಿ ಇಷ್ಟ ಪಟ್ಟುತಿನ್ನುತ್ತಾರೆ. ಹಾಗಿದ್ದರೆ ಯಾಕೆ ತಡ ಬನ್ನಿ, ಪಾಸ್ತಾ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ವಿವರಿಸಲಾಗಿದೆ.

ಬೇಕಾಗುವ ಸಾಮಗ್ರಿಗಳು:
* ಪ್ಯಾಕ್ ಪಾಸ್ತಾ- 2ಕಪ್
* ಕ್ಯಾರೆಟ್, ಬೀನ್ಸ್- ಅರ್ಧ ಕಪ್
* ಬೆಳ್ಳುಳ್ಳಿ- 1
* ಮೆಣಸಿನಕಾಯಿ ಬೀಜ -ಅರ್ಧ ಚಮಚ
* ಟೊಮೆಟೋ ಸಾಸ್ – 3 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್

ಮಾಡುವ ವಿಧಾನ:
* ಪಾಸ್ತಾವನ್ನು ಕುದಿಯುವ ನೀರಿಗೆ ಹಾಕಿ ಬಸಿದಿಟ್ಟುಕೊಳ್ಳಿ.
* ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಮೆಣಸಿನಕಾಯಿ ಬೀಜ ಹಾಕಿ ಹುರಿಯಿರಿ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

* ನಂತರ ಕ್ಯಾರೆಟ್, ಬೀನ್ಸ್ ಚೂರು ಹಾಕಿ ಬೇಯಿಸಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ನಂತರ ಬೇಯಿಸಿದ ಪಾಸ್ತಾ ಹಾಕಿ ಹುರಿದು ಉಪ್ಪು, ಟೊಮೆಟೊ ಸಾಸ್ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಪಾಸ್ತಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

Leave a Reply

Your email address will not be published.

Back to top button