ಸರಳವಾಗಿ ಮಾಡುವ ಅಡುಗೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪಾಸ್ತಾದಿಂದ ಹೊಸ ರುಚಿಯ ಅಡುಗೆಯನ್ನು ಮಾಡಿ. ಮನೆಮಂದಿ ಇಷ್ಟ ಪಟ್ಟುತಿನ್ನುತ್ತಾರೆ. ಹಾಗಿದ್ದರೆ ಯಾಕೆ ತಡ ಬನ್ನಿ, ಪಾಸ್ತಾ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ವಿವರಿಸಲಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಪ್ಯಾಕ್ ಪಾಸ್ತಾ- 2ಕಪ್
* ಕ್ಯಾರೆಟ್, ಬೀನ್ಸ್- ಅರ್ಧ ಕಪ್
* ಬೆಳ್ಳುಳ್ಳಿ- 1
* ಮೆಣಸಿನಕಾಯಿ ಬೀಜ -ಅರ್ಧ ಚಮಚ
* ಟೊಮೆಟೋ ಸಾಸ್ – 3 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್
Advertisement
ಮಾಡುವ ವಿಧಾನ:
* ಪಾಸ್ತಾವನ್ನು ಕುದಿಯುವ ನೀರಿಗೆ ಹಾಕಿ ಬಸಿದಿಟ್ಟುಕೊಳ್ಳಿ.
* ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಮೆಣಸಿನಕಾಯಿ ಬೀಜ ಹಾಕಿ ಹುರಿಯಿರಿ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್
Advertisement
Advertisement
* ನಂತರ ಕ್ಯಾರೆಟ್, ಬೀನ್ಸ್ ಚೂರು ಹಾಕಿ ಬೇಯಿಸಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ನಂತರ ಬೇಯಿಸಿದ ಪಾಸ್ತಾ ಹಾಕಿ ಹುರಿದು ಉಪ್ಪು, ಟೊಮೆಟೊ ಸಾಸ್ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಪಾಸ್ತಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ