ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಹಾಗಾದರೆ ನೀವು ಹೋಟೆಲ್‌ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಪನೀರ್ ಭುರ್ಜಿವನ್ನು ಮನೆಯಲ್ಲಿ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಪನೀರ್ – 2 ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
* ಬೆಣ್ಣೆ- ಸ್ವಲ್ಪ
* ಜೀರಿಗೆ- 1 ಚಮಚ
* ರಚಿಗೆ ತಕ್ಕಷ್ಟು ಉಪ್ಪು
* ಕಡಲೆ ಹಿಟ್ಟು- 1 ಚಮಚ
* ಟೊಮೆಟೊ – 1
* ಕ್ಯಾಪ್ಸಿಕಂ- 1
* ಗರಂ ಮಸಾಲಾ- 1 ಚಮಚ
* ಕಸೂರಿ ಮೇಥಿ- ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಈರುಳ್ಳಿ-1
* ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
* ಅರಿಶಿಣ- 1 ಚಮಚ
* ಮೆಣಸಿನ ಪುಡಿ- 1ಚಮಚ
* ಜೀರಿಗೆ ಪುಡಿ- 1 ಚಮಚ
* ದನಿಯಾ ಪುಡಿ- 1ಚಮಚ
Advertisement
Advertisement
ಮಾಡುವ ವಿಧಾನ:
* ಪಾತ್ರೆಗೆ ಅಡುಗೆ ಎಣ್ಣೆ, ಬೆಣ್ಣೆ, ಜೀರಿಗೆ, ಈರುಳ್ಳಿ, ಟೊಮೆಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
* ಈಗ ಅರಿಶಿಣ, ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಉಪ್ಪು, ಕ್ಯಾಪ್ಸಿಕಂ, ಹಿಸುಕಿದ ಪನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಗರಂ ಮಸಾಲಾ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೇಯಿಸಿದರೆ ಪನೀರ್ ಭುರ್ಜಿ ಸವಿಯಲು ಸಿದ್ಧವಾಗುತ್ತದೆ. ಚಪಾತಿಯೊಂದಿಗೆ ಪನೀರ್ ಭುರ್ಜಿಯನ್ನು ಸೇವಿಸಬಹುದಾಗಿದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ