ಪಾಲಕ್ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳಿವೆ. ವಿಟಮಿನ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಪಾಲಾಕ್ ಸೊಪ್ಪು ಮಕ್ಕಳಿಗೆ ತುಂಬಾ ಅವಶ್ಯಕ. ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಕರ ಸಹ ಹೌದು. ಪಾಲಾಕ್ ರೈಸ್ ಮಾಡುವ ಸರಳ ವಿಧಾನ ನಿಮಗಾಗಿ
ಬೇಕಾಗುವ ಸಾಮಗ್ರಿಗಳು:
* ಬೇಕಾಗುವ ಪದಾರ್ಥಗಳು:
* ಅನ್ನ- 1ಕಪ್
* ಪಾಲಾಕ್ ಸೊಪ್ಪು- ಸ್ವಲ್ಪ
* ಈರುಳ್ಳಿ- 1
* ಹಸಿ ಮೆಣಸಿನಕಾಯಿ-2
* ಕರಿಮೆಣಸು
* ಸಾಸಿವೆ- 1 ಚಮಚ
* ಜೀರಿಗೆ- 1ಚಮಚ
* ಲವಂಗ- 2
* ಗೋಡಂಬಿ- ಅಧ ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅಧ ಕಪ್
* ನಿಂಬೆಹಣ್ಣು- 1
Advertisement
Advertisement
ಮಾಡುವ ವಿಧಾನ:
* ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಮೆಣಸಿನ ಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
Advertisement
* ನಂತರ ಪಾಲಾಕ್ ಸೊಪ್ಪನ್ನು ಅದಕ್ಕೆ ಹಾಕಿ ಹುರಿಯಬೇಕು. ಅರ್ಧ ಕಪ್ ನೀರು ಹಾಕಿ ಕುದಿಯುವವರೆಗೂ ಸಣ್ಣ ಉರಿಯಲ್ಲಿ ಇಟ್ಟು ಕುದಿಸಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
* ಈಗ ಲವಂಗ, ಚಕ್ಕೆ, ಕರಿಮೆಣಸು ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಬೇರೆ ಬಾಣಲೆಯಲ್ಲಿ ಹಾಕಿ ಹುರಿಯಿರಿ.
* ಎಲ್ಲಾ ಪದಾರ್ಥಗಳನ್ನು ಹುರಿದುಕೊಂಡ ಮೇಲೆ ಪಾಲಾಕ್ ಮಿಶ್ರಣದೊಂದಿಗೆ ರುಬ್ಬಿದ ಮಿಶ್ರಣ, ಅನ್ನವನ್ನು ಹಾಕಿ ಬೆರೆಸಿ ಅಗತ್ಯವಿದ್ದರೆ ಉಪ್ಪು ಬೆರೆಸಿ ಚೆನ್ನಾಗಿ ಕಲಸಿ ತಣ್ಣಗಾಗಲು ಬಿಡಬೇಕು. ನಿಂಬೆ ರಸವನ್ನು ಇದರ ಮೇಲೆ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿದರೆ ಪಾಲಾಕ್ ರೈಸ್ ಸವಿಯಲು ಸಿದ್ಧವಾಗುತ್ತದೆ.