ಊಟದ ಜೊತೆ ಉಪ್ಪಿನಕಾಯಿ ಇದ್ದರನೆ ರುಚಿ. ಉಪ್ಪಿನ ಕಾಯಿಯಲ್ಲಿ ನಿಂಬೆ, ಮಾವಿನಮಿಡಿ ಉಪ್ಪಿನಕಾಯಿ ಹೀಗೆ ಅನೇಕ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಬಹುದು. ಇವತ್ತು ನಾವು ಈರುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನದ ಬಗ್ಗೆ ತಿಳಿಯೋಣ.
Advertisement
ಬೇಕಾಗುವ ಸಾಮಗ್ರಿಗಳು:
* ಕೆಜಿ ಈರುಳ್ಳಿ- ಅರ್ಧ ಕೆಜಿ
* ಬೆಳ್ಳುಳ್ಳಿ – 100 ಗ್ರಾಂ
* ಹಸಿಮೆಣಸಿನ ಕಾಯಿ 4-5
* ಮೆಣಸಿನ ಪುಡಿ -2 ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
* ಹುಣಸೆಹಣ್ಣಿನ ರಸ -2 ಚಮಚ
* ಬೆಲ್ಲ -ಸ್ವಲ್ಪ
* ಬೇವಿನ ಎಲೆ – ಸ್ವಲ್ಪ
* ರುಚಿಗೆ ತಕ್ಕ ಉಪ್ಪು
Advertisement
Advertisement
ಮಾಡುವ ವಿಧಾನ:
* ಈರುಳ್ಳಿ, ಹಸಿಮೆಣಸಿ ಕಾಯಿಯನ್ನು ಕತ್ತರಿಸಬೇಕು.ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಇಡಿ
* ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಮೇಲಿನ ಮಿಶ್ರಣವನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಇದನ್ನೂ ಓದಿ: ಆರೋಗ್ಯಕರವಾದ ಹುರುಳಿಕಾಳು ಸಾರು ಮಾಡುವ ಸುಲಭ ವಿಧಾನ
Advertisement
* ಈಗ ಕಡಿಮೆ ಉರಿ ಮಾಡಿ ಅದಕ್ಕೆ ಮೆಣಸಿನ ಪುಡಿ, ಉಪ್ಪು, ಹುಣಸೆ ಹಣ್ಣಿನ ರಸ, ಬೆಲ್ಲ ಹಾಕಿ ಸ್ವಲ್ಪ ಹೊತ್ತು ಸೌಟ್ ನಿಂದ ತಿರುಗಿಸುತ್ತಾ ಇರಬೇಕು.
* ಉಳಿದ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಈ ಮಿಶ್ರಣದ ಮೇಲೆ ಸುರಿಯಿರಿ. ಈಗ ರುಚಿಯಾದ ಈರುಳ್ಳಿ ಉಪ್ಪಿನ ಕಾಯಿ ಸವಿಯಲು ಸಿದ್ಧವಾಗುತ್ತದೆ.