ಬಂಗುಡೆ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.
ಬೇಕಾಗುವ ಸಾಮಗ್ರಿಗಳು:
* ಬಂಗುಡೆ ಮೀನು – ಅರ್ಧ ಕೆಜಿ
* ಕಾಳುಮೆಣಸಿನ ಪುಡಿ – 1 ಚಮಚ
* ಸೋಂಪು ಪುಡಿ – 1 ಚಮಚ
* ಕರಿಬೇವು- ಸ್ವಲ್ಪ
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಅಡುಗೆ ಎಣ್ಣೆ- 2 ಚಮಚ
* ಗರಂ ಮಸಾಲೆ- ಅರ್ಧ ಚಮಚ
* ನಿಂಬೆರಸ – 1 ಚಮಚ
* ಅರಿಶಿಣ – ಸ್ವಲ್ಪ
* ಖಾರದಪುಡಿ – ಅರ್ಧ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ ಪೌಡರ್- ಅರ್ಧ ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
* ಒಂದು ಬೌಲ್ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
Advertisement
* ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.