ಬಾಳೆಹಣ್ಣಿನ ಸ್ಮೂತಿ ಆರೋಗ್ಯಕರ ಮತ್ತು ದಪ್ಪ ಪಾನೀಯ ಪಾಕವಿಧಾನವಾಗಿದ್ದು, ಡ್ರೈ ಫ್ರೂಟ್ಸ್ ಮತ್ತು ತಣ್ಣಗಿರುವ ಹಾಲಿನೊಂದಿಗೆ ತಯಾರಿಸಲಾಗುತ್ತದೆ. ಆರೋಗ್ಯಕರ ಮತ್ತು ಸುಲಭವಾಗಿ ತೂಕ ಇಳಿಸುವ ಉಪಾಹಾರ ಪಾಕವಿಧಾನವಾಗಿ ಬಳಸಬಹುದು. ಆರೋಗ್ಯಕರವಾದ ಬಾಳೆಹಣ್ಣಿನ ಸ್ಮೂತಿ ಮಾಡುವ ಸರಳ ವಿಧಾನ ನಿಮಗಾಗಿ.
Advertisement
ಬೇಕಾಗುವ ಸಾಮಗ್ರಿಗಳು:
* ಖರ್ಜೂರ – ಸ್ವಲ್ಪ
* ಬಾದಾಮಿ, ಒಣ ದ್ರಾಕ್ಷಿ- ಸ್ವಲ್ಪ
* ಗೋಡಂಬಿ, ಪಿಸ್ತಾ- ಸ್ವಲ್ಪ
* ಬಾಳೆಹಣ್ಣು – 3
* ಜೇನುತುಪ್ಪ- 1ಚಮಚ
* ಹಾಲು- 2 ಕಪ್
* ಕೋಕೋ ಪೌಡರ್ ಸ್ವಲ್ಪ
Advertisement
ಮಾಡುವ ವಿಧಾನ:
* ಒಂದು ಸಣ್ಣ ಬಟ್ಟಲಿನಲ್ಲಿ 5 ಖರ್ಜೂರ, ಬಾದಮ್, ಗೋಡಂಬಿ, ಪಿಸ್ತಾ ಮತ್ತು ಒಣ ದ್ರಾಕ್ಷಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
Advertisement
* ನಂತರ ಬಾಳೆಹಣ್ಣು, ಜೇನುತುಪ್ಪ, ಹಾಲು, ಒಣ ಹಣ್ಣುಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ನಂತರ ಒಂದು ಗ್ಲಾಸ್‍ಗೆ ಡ್ರೈ ಫ್ರೂಟ್ಸ್ ಬಾಳೆಹಣ್ಣಿನ ಸ್ಮೂದಿಯನ್ನು ಹಾಕಿ. ಬೇಕಾದಲ್ಲಿ ಟ್ರೈ ಡ್ರೈ ಫ್ರೂಟ್ಸ್ ಸೇರಿಸಿಕೊಂಡು ಸವಿಯಿರಿ.