ಚಳಿಗಾಲ ಬಂತೆಂದರೆ ಸಾಕು ನಾಲಿಗೆಯ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಸಬ್ಬಸ್ಸಿಗೆ ಸೊಪ್ಪಿನ ಸೂಪ್ಎಂದಾದರೂ ಸೇವಿಸಿದ್ದೀರಾ..? ಈ ಸೂಪ್ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?
Advertisement
ಬೇಕಾಗುವ ಸಾಮಗ್ರಿಗಳು:
* ಸಬ್ಬಸ್ಸಿಗೆ ಸೊಪ್ಪು -2 ಕಪ್
* ಈರುಳ್ಳಿ -2
* ಕ್ಯಾರೆಟ್ -1
* ಬೆಳ್ಳುಳ್ಳಿ -1
* ರುಚಿಗೆ ತಕ್ಕಷ್ಟು ಉಪ್ಪು
* ಅಚ್ಚ ಖಾರದ ಪುಡಿ -1 ಚಮಚ
* ಕಾಳುಮೆಣಸಿನ ಪುಡಿ -1 ಚಮಚ
* ನಿಂಬೆಹಣ್ಣು- 1
Advertisement
ಮಾಡುವ ವಿಧಾನ:
* ಮೊದಲು ಕುಕ್ಕರ್‌ಗೆ ಸಬ್ಬಸ್ಸಿಗೆ ಸೊಪ್ಪು, ಈರುಳ್ಳಿ, ಕ್ಯಾರೆಟ್, ಬೆಳ್ಳುಳ್ಳಿ ಮತ್ತು ಒಂದು ಕಪ್ ನೀರು ಹಾಕಿ ಒಂದು ಸೀಟಿ ಕೂಗಿಸಿಕೊಳ್ಳಬೇಕು.
* ನಂತರ ಸೊಪ್ಪು ಮತ್ತು ತರಕಾರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
Advertisement
* ರುಬ್ಬಿಕೊಂಡ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ ಅದರ ಜೊತೆಗೆ ಶೋಧಿಸಿದ ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿಯನ್ನು ಹಾಕಿ ಕುದಿಸಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
* ಕುದಿಸಿದ ನಂತರ ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಹಾಕಿ ಕೈಯಾಡಿಸಿದರೆ ಬಿಸಿಬಿಸಿಯಾದ ಸಬ್ಬಸ್ಸಿಗೆ ಸೊಪ್ಪಿನ ಸೂಪ್ ಸವಿಯಲು ಸಿದ್ಧವಾಗುತ್ತದೆ.