ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಟನ್, ಚಿಕನ್, ಫಿಶ್, ಮೊಟ್ಟೆ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ನಾವು ಇಂದು ಹೇಳಿರುವ ಹಂದಿ ಮಾಂಸದ ಗೊಜ್ಜುನ್ನು ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಹಂದಿ ಮಾಂಸ – 1 ಕೆಜಿ
* ಒಣ ಮೆಣಸಿನಕಾಯಿ – 10 ರಿಂದ 12
* ಹುಣಸೆ ಹಣ್ಣಿನ ರಸ – 1 ಚಮಚ
* ಅರಶಿಣ ಪುಡಿ – 1 ಚಮಚ
* ಈರುಳ್ಳಿ – 2
* ಬೆಳ್ಳುಳ್ಳಿ – 2
* ಶುಂಠಿ, ದಾಲ್ಚಿನಿ, ಕರಿ ಬೇವು, ಮೆಂತ್ಯೆಕಾಳುಗಳು- ಸ್ವಲ್ಪ
* ತೆಂಗಿನ ಹಾಲು – 2 ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
* ತುಪ್ಪ- 2 ಚಮಚ
* ನಿಂಬೆ ರಸ – 1 ಚಮಚ
* ಟೊಮೆಟೋ-1
* ಜೀರಿಗೆ-1 ಚಮಚ
* ಖಾರದಪುಡಿ- 1 ಚಮಚ
* ಕೊತ್ತಂಬರಿ ಇದನ್ನೂ ಓದಿ: ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ
Advertisement
ಮಾಡುವ ವಿಧಾನ:
* ಹಂದಿ ಮಾಂಸವನ್ನು ತೊಳೆದು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ
* ಒಣ ಮೆಣಸು, ಹುಣಸೆಹಣ್ಣು, ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ, ಖಾರದಪುಡಿ, ಜೀರಿಗೆ, ಟೊಮೆಟೋ ಹಾಕಿ ರುಬ್ಬಿಕೊಳ್ಳಿ.
Advertisement
Advertisement
* ಮೊದಲೇ ಹೇಳಿರುವಂತೆ ಪಾತ್ರೆಯಲ್ಲಿರುವ ಹಂದಿ ಮಾಂಸಕ್ಕೆ, ದಾಲ್ಚಿನ್ನಿ ಹಾಗೂ ಹುಣಸೆ ಹಣ್ಣಿನ ನೀರನ್ನು ಸೇರಿಸಿ. ಅಲ್ಲದೇ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ, ಕರಿಬೇವು, ಹಾಗೂ ಮೆಂತ್ಯೆಕಾಳುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
* ತೆಂಗಿನ ಹಾಲು, ತುಪ್ಪ, ಈರುಳ್ಳಿ, ಕರಿಬೇವು, ಮೆಂತ್ಯಕಾಳುಗಳನ್ನು ಚೆನ್ನಾಗಿ ಫ್ರೈ ಮಾಡಬೇಕು
* ಅದಕ್ಕೆ ನಿಂಬೆ ರಸ, ಹಸಿಮೆಣಸು, ಕೊತ್ತಂಬರಿ ಸೇರಿಸಿ ಬೇಯಿಸಿದರೆ ಹಂದಿ ಮಾಂಸದ ಗೊಜ್ಜು ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ