ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು ಈ ಪಾಕವಿಧಾನವನ್ನು ತಯಾರಿಸಬಹುದು. ಹೋಟೆಲ್ ಆಹಾರಗಳಿಗಿಂತ ಮನೆಯಲ್ಲಿ ಮಾಂಸಹಾರ ಅಡುಗೆ ಮಾಡುವುದು ಎಂದರೆ ನಾನ್‍ವೆಜ್‍ಪ್ರಿಯರಿಗೆ ಸಖತ್ ಇಷ್ಟವಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಚಿಕನ್ ಮಸಾಲ ತಯಾರಿಸಬಹುದು. ಮಾಂಸಹಾರಿಗಳು ಬಗೆ ಬಗೆಯ ಖಾದ್ಯವನ್ನು ತಯಾರಿಸುತ್ತಾರೆ. ಈ ಖಾರವಾದ ಚಿಕನ್ ಮಸಾಲ ಅಕ್ಕಿ ರೊಟ್ಟಿಯ ಜೊತೆಗೆ ಸೇವಿಸಲು ಸಖತ್ ರುಚಿಯಾಗಿರುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್ – ಅರ್ಧ ಕೆಜಿ
* ಕೆಂಪು ಮೆಣಸಿನಕಾಯಿ – 8
* ಈರುಳ್ಳಿ – 2
* ಟೊಮೆಟೊ – 2
* ಗೋಡಂಬಿ – 2 ಟೇಬಲ್ ಚಮಚ,
* ಅರಿಸಿಣ – 1 ಚಮಚ,
* ಅಡುಗೆಎಣ್ಣೆ- 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ದನಿಯಾ ಪುಡಿ- 1 ಚಮಚ
* ಗರಂಮಸಾಲ – 1 ಚಮಚ
* ಕಸೂರಿ ಮೇಥಿ- 1 ಚಮಚ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
Advertisement
ಮಾಡುವ ವಿಧಾನ:
* ಒಣಮೆಣಸಿನಕಾಯಿ, ಟೊಮೆಟೋ, ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಒಂದು ಬಾಣಲೆಯನ್ನು ಬಿಸಿಗೆ ಇಟ್ಟು 2 ಟೇಬಲ್ ಚಮಚ ಎಣ್ಣೆ ಹಾಕಿ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಾಡಿಸಿಕೊಳ್ಳಿ.
Advertisement
* ನಂತರ ಚಿಕನ್ ಸೇರಿಸಿ ಅದಕ್ಕೆ ಅರಿಶಿಣ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ. ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ.
* ಕೊನೆಯಲ್ಲಿ ಗರಂಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು, ಅರ್ಧ ಲೋಟ ನೀರು ಸೇರಿಸಿದರೆ ರುಚಿಯಾದ ಚಿಕನ್ ಮಸಾಲ ಸವಿಯಲು ಸಿದ್ಧವಾಗುತ್ತದೆ.
<
/p>