ರುಚಿಯಾದ ಆಹಾರ ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಅಡುಗೆ ಮಾಡಲು ಸುಲಭವಾಗಿರುವ ರೆಸಿಪಿಗಳನ್ನು ನಾವು ಹುಡುಕುತ್ತಿರುತ್ತೇವೆ. ನಿಮ್ಮ ರುಚಿಗೆಟ್ಟ ನಾಲಿಗೆಗೆ ಹೊಸ ನಳಪಾಕವನ್ನು ತಿನ್ನಲು ಬಯಸುತ್ತದೆ. ಸರಳ ವಿಧಾನದಲ್ಲಿರುವ ತೊಗರಿ ಬೇಳೆ ದೋಸೆಯನ್ನು ತಯಾರಿಸುವ ವಿಧಾನ ನಿಮಗಾಗಿ.
ಬೇಕಾಗುವ ಸಾಮಗ್ರಿಗಳು:
* ಅಕ್ಕಿ- 2 ಕಪ್
* ಮೆಂತ್ಯೆ- 1 ಚಮಚ
* ತೆಂಗಿನ ಕಾಯಿ ತುರಿ- 1 ಕಪ್
* ಅವಲಕ್ಕಿ- 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ- ಅರ್ಧ ಕಪ್
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಾಗೂ ಮೆಂತ್ಯೆ, ಅವಲಕ್ಕಿಯನ್ನು ಹಾಕಿ 4 ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಟ್ಟಿರಬೇಕು.
* ಮಿಕ್ಸಿ ಜಾರ್’ಗೆ ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅವಲಕ್ಕಿ ಹಾಗೂ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ಈ ಮಿಶ್ರಣವನ್ನು 8 ಗಂಟೆಗಳ ಕಾಲ ಮುಚ್ಚಿ ಇಟ್ಟಿರಬೇಕು. ನಂತರ, ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಬಿಸಿ ತವಾ ಮೇಲೆ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಬೀಯಿಸಿದರೆ ರುಚಿಕರವಾದ ತೆಂಗಿನಕಾಯಿ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ