ಬೆಳ್ಳುಳ್ಳಿ ಅಥವಾ ಈರುಳ್ಳಿಗಳಿಂದ ಇದನ್ನು ತಯಾರಿಸಲಾಗುತ್ತದೆ, ಆದರೆ ಇತರ ರೀತಿಯ ತರಕಾರಿಗಳೊಂದಿಗೆ ಸಹ ಮಾಡಬಹುದಾಗಿದೆ. ಅಂತಹ ಒಂದು ಸುಲಭ ಮತ್ತು ಸರಳ ನವೀನ ಚಟ್ನಿ ಪಾಕವಿಧಾನವಾಗಿದೆ. ಸುಟ್ಟ ಕ್ಯಾಪ್ಸಿಕಂ ಚಟ್ನಿ ಫ್ರಿಡ್ಜ್ನಲ್ಲಿಟ್ಟು ಒಂದು ವಾರದವರೆಗೆ ಉಳಿಯುತ್ತದೆ. ಈ ಚಟ್ನಿ ಮಾಡುವ ಸುಲಭ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಕ್ಯಾಪ್ಸಿಕಂ-2
* ಟೊಮೆಟೊ- 1
* ಬೆಳ್ಳುಳ್ಳಿ- 1
* ಅಡುಗೆ ಎಣ್ಣೆ- ಅರ್ಧ ಕಪ್
* ಉದ್ದಿನ ಬೇಳೆ- ಸ್ವಲ್ಪ
* ಕಡ್ಲೆ ಬೇಳೆ- ಸ್ವಲ್ಪ
* ದನಿಯಾ- ಸ್ವಲ್ಪ
* ಜೀರಿಗೆ – ಸ್ವಲ್ಪ
* ಕೆಂಪು ಮೆಣಸಿನಕಾಯಿ- 2
* ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: * ಅಡುಗೆ ಎಣ್ಣೆ
* ಸಾಸಿವೆ- ಸ್ವಲ್ಪ
* ಉದ್ದಿನ ಬೇಳೆ- ಸ್ವಲ್ಪ
* ಕೆಂಪು ಮೆಣಸಿನಕಾಯಿ-2
* ಅರಿಶಿಣ- ಸ್ವಲ್ಪ
* ಮೆಣಸಿನ ಪುಡಿ- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ 2 ಕ್ಯಾಪ್ಸಿಕಂ, 2 ಟೊಮೆಟೊ ಮತ್ತು 1 ಇಡೀ ಬೆಳ್ಳುಳ್ಳಿಯನ್ನು ರೋಸ್ಟ್ ಮಾಡಿಕೊಳ್ಳಿ.
* ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಕಡ್ಲೆ ಬೇಳೆ, ದನಿಯಾ, ಜೀರಿಗೆ ಕೆಂಪು ಮೆಣಸಿನಕಾಯಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
Advertisement
* ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್ಗೆ ಹಾಕಿ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು.
* ಅಡುಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕೆಂಪು ಮೆಣಸಿನಕಾಯಿ, ಅರಿಶಿಣ, ಮೆಣಸಿನ ಪುಡಿ ಸೇರಿಸಿ ಒಗ್ಗರಣೆಯನ್ನು ತಯಾರಿಸಿ ಕೊಳ್ಳಬೇಕು.
* ರುಬ್ಬಿ ಮಿಶ್ರಣಕ್ಕೆ ಒಗ್ಗರಣೆಯನ್ನು ಸೇರಿಸಿದರೆ ರುಚಿಯಾದ ಕ್ಯಾಪ್ಸಿಕಂ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ