ಯಾವುದೇ ವಿಶೇಷವಿಲ್ಲ. ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಬರ್ಫಿ ಮಾಡಿ ಸವಿಯಿರಿ…
ಬೇಕಾಗುವ ಸಾಮಗ್ರಿಗಳು:
* ಪಾರ್ಲೆಜಿ ಬಿಸ್ಕೆಟ್ – 3 ಪ್ಯಾಕೆಟ್
* ಸಕ್ಕರೆ – ಅ ಕಪ್
* ತುಪ್ಪ- ಅರ್ಧ ಕೆಜಿ
* ಹಾಲಿನ ಪುಡಿ- 2 ಚಮಚ
* ಹಾಲು- 1 ಕಪ್
* ಡ್ರೈಫ್ರೂಟ್ಸ್- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಪಾರ್ಲೆಜಿ ಬಿಸ್ಕೆಟ್ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ.
* ನಂತರ ತುಪ್ಪದಲ್ಲಿ ಹುರಿದ ಬಿಸ್ಕೇಟ್ನ್ನು ಮಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
Advertisement
* ಬಿಸ್ಕೇಟ್ ಪುಡಿಯನ್ನು ಹಾಲಿನ ಪುಡಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಮತ್ತೊಂದು ಬಾಣೆಲೆ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ಗಟ್ಟಿಯಾದ ಬಳಿಕ ಹಾಲಿನ ಪುಡಿ, ಬಿಸ್ಕೆಟ್ ಪುಡಿಯನ್ನು ಹಾಕಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಕದಡಿಕೊಂಡು, ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ, ರುಚಿಕರವಾದ ಬಿಸ್ಕೆಟ್ ಬರ್ಫಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ