ಯಾವುದೇ ವಿಶೇಷವಿಲ್ಲ. ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಬರ್ಫಿ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ತುಪ್ಪ- 1 ಕಪ್
* ಬಾಂಬೆ ರವೆ – 2 ಕಪ್
* ತೆಂಗಿನಕಾಯಿ – ಅರ್ಧ ಕಪ್
* ಹಾಲು- 1 ಕಪ್
* ಸಕ್ಕರೆ- 2ಕಪ್
* ಬಾದಾಮಿ ಪುಡಿ- ಸ್ವಲ್ಪ
* ಗೋಡಂಬಿ ಪುಡಿ- ಸ್ವಲ್ಪ
* ಏಲಕ್ಕಿ ಪೌಡರ್- ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ತವಾದಲ್ಲಿ ತುಪ್ಪವನ್ನು ಬಿಸಿ ಮಾಡಿ ಬಾಂಬೆ ರವಾವನ್ನು, ತೆಂಗಿನಕಾಯಿ ಬೇರೆ ಬೇರೆಯಾಗಿ ಪರಿಮಳ ಬರುವ ತನಕ ಹುರಿಯಿರಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
* ಈಗ ಮತ್ತೊಂದು ಪಾತ್ರೆಯಲ್ಲಿ ಹಾಲು ಕಾಯಿಸಿ ಹುರಿದ ಬಾಂಬೆ ರವಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗಟ್ಟಿ ಹದಕ್ಕೆ ಬರುವವರೆಗೂ ಬೇಯಿಸಿಕೊಳ್ಳಿ.
* ಈಗ 1 ಕಪ್ ಸಕ್ಕರೆ ಸೇರಿಸಿ ಬಾದಾಮಿ ಪುಡಿ, ಗೋಡಂಬಿ ಪುಡಿ, ಏಲಕ್ಕಿ ಪೌಡರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಬಟರ್ ಪೇಪರ್‌ಗೆ ತಯಾರಿಸಿದ ಮಿಶ್ರಣವನ್ನು ಹಾಕಿ ಸ್ವೀಟ್ ಕಟ್ ಮಾಡಿದರೆ ರುಚಿಯಾದ ಸ್ವೀಟ್ ಸಿದ್ಧವಾಗುತ್ತದೆ.