ವಿಶೇಷವೇನಿಲ್ಲ, ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಬಾಳೆಹಣ್ಣಿನ ಪಾಯಸ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
* ಪಚ್ಚ ಬಾಳೆಹಣ್ಣು- 2
* ಹೆಸರುಬೇಳೆ- ಅರ್ಧ ಕಪ್
* ತುಪ್ಪ- ಅರ್ಧ ಕಪ್
* ಗೋಡಂಬಿ, ದ್ರಾಕ್ಷಿ- ಸ್ವಲ್ಪ
* ಹಸಿ ತೆಂಗಿನಕಾಯಿ – ಸ್ವಲ್ಪ
* ಪುಡಿ ಬೆಲ್ಲ- 1 ಕಪ್
* ತೆಂಗಿನಹಾಲು- ಅರ್ಧ ಕಪ್
* ಏಲಕ್ಕಿ ಪುಡಿ – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಬಾಳೆಹಣ್ಣನ್ನು ಕತ್ತರಿಸಿಟ್ಟುಕೊಳ್ಳಬೇಕು. ಹೆಸರುಬೇಳೆಯನ್ನು ಪರಿಮಳ ಬರುವರೆಗೆ ಹುರಿದುಕೊಂಡು ಮೆತ್ತಗೆ ಬೇಯಿಸಿಕೊಳ್ಳಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ಒಂದು ಪಾತ್ರೆಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ತೆಂಗಿನಕಾಯಿಯನ್ನು ಹುರಿದು ತೆಗೆದಿಡಿ.
Advertisement
Advertisement
* ಕತ್ತರಿಸಿಕೊಂಡ ಬಾಳೆಹಣ್ಣನ್ನು ಉಳಿದ ತುಪ್ಪದಲ್ಲಿ ಹಾಕಿ ಪ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಬೆಲ್ಲ, ನೀರು, ಬೆಂದ ಹೆಸರುಬೇಳೆ, ಬಾಳೆಹಣ್ಣು, ತೆಂಗಿನ ಹಾಲನ್ನು ಹಾಕಿ ಒಂದು ನಿಮಿಷ ಕುದಿಸಿ. ಹುರಿದ ಗೋಡಂಬಿ, ತೆಂಗಿನಚೂರು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ರುಚಿಕರವಾದ ಬಾಳೆಹಣ್ಣಿನ ಪಾಯಸ ಸವಿಯಲು ಸಿದ್ಧವಾಗುತ್ತದೆ.